ಹಾವುಗಳು ನಮ್ಮ ಒಡನಾಡಿ
ಧಾರವಾಡ: ಪರಿಸರ ಅಧ್ಯಯನದಡಿ ಇಲ್ಲಿನ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯು ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳಿಗೆ ಹಾವುಗಳು ಮತ್ತು ನಮ್ಮ ಒಡನಾಡಿ ವಿಷಯದ ಕುರಿತು ಪ್ರಾತ್ಯಕ್ಷಿತೆಯೊಂದಿಗೆ ತಿಳಿಸಿಕೊಡಲಾಯಿತು. ಡಿಎಸ್ಪಿ ಎಸ್.ಐ. ಬುಯ್ಯಾರ ಮಾತನಾಡಿ, ಹಾವುಗಳ ನಮ್ಮ ಶತ್ರುವಲ್ಲ. ಅವುಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸುವ ಮೂಲಕ ಜ್ಞಾನ ಹೊಂದಬೇಕು ಎಂದರು. ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ, ಮಂಜುನಾಥ ಕುಂಬಾರ, ಪ್ರಾಚಾರ್ಯ ಡಾ.ವೈ.ಪಿ. ಕಲ್ಲನಗೌಡರ, ಡಾ. ಸತೀಶ ಇರಕಲ್, ಪಿ.ಬಿ. ಲಕ್ಷ್ಮೇಶ್ವರ, ನಾರಾಯಣ ಪಡಸಲಗಿ, ಭರತ ತಳವಾರ, ಶಿವಾನಂದ ಜೆ.ಸಿ ಇದ್ದರು.
ಪ್ರಥಮ ಚಿಕಿತ್ಸೆ ಕಾರ್ಯಾಗಾರ
ಧಾರವಾಡ: ಜಿಲ್ಲಾ ಪೊಲೀಸ್ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಂಟಿಯಾಗಿ ಇಲ್ಲಿನ ಜಿಲ್ಲಾ ಪೊಲೀಸ್ ಸಿಬ್ಬಂದಿಗೆ ಏರ್ಪಡಿಸಿದ್ದ ಪ್ರಥಮ ಚಿಕಿತ್ಸೆ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಡಾ.ವಿ.ಡಿ. ಕರ್ಪೂರಮಠ, ಡಿಎಸ್ಪಿ ಎಸ್.ಐ. ಬುಯ್ಯಾರ್, ಜ್ಯೋತಿ ಉಡುಪಿ, ಡಾ. ಉಮೇಶ ಹಳ್ಳಗೇರಿ, ಉಷಾ ಜೋಸೆಫ್, ಭರತ ತಳವಾರ ಇದ್ದರು.
ಇಂದು ನೋಂದಣಿ
ಧಾರವಾಡ: ಶ್ರೀ ಶಿವಶಕ್ತಿ ಸರ್ವಧರ್ಮ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ವಧು-ವರರ ಉಚಿತ ನೋಂದಣಿ ಕಾರ್ಯಕ್ರಮ ಜೂ. 27ರಿಂದ ಜುಲೈ 7ರ ವರೆಗೆ ನಡೆಯಲಿದೆ. ವಧು-ವರರು ತಮ್ಮ ಸ್ವವಿವರದೊಂದಿಗೆ ಸಂಪರ್ಕಿಸಬೇಕು. ಮಾಹಿತಿಗಾಗಿ- 9341242595 ಸಂಪರ್ಕಿಸಬಹುದೆಂದು ಸುರೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಹಾರ ನಿಧಿ ಸಂಗ್ರಹ
ಧಾರವಾಡ: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ವತಿಯಿಂದ ಉತ್ತರಾಖಂಡ್ ರಾಜ್ಯದ ಸಂತ್ರಸ್ತರ ನೆರವಿಗಾಗಿ ಜೂ. 27, 28ರಂದು ಧಾರವಾಡ ನಗರದ ಬಡಾವಣೆಗಳಲ್ಲಿ ಪರಿಹಾರ ನಿಧಿ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೆ ನಮ್ಮ ವೈದ್ಯಕೀಯ ತಂಡವೊಂದು ರುದ್ರಪ್ರಯಾಗ ಜಿಲ್ಲೆಯಲ್ಲಿ ವೈದ್ಯಕೀಯ ಶಿಬಿರ ಏರ್ಪಡಿಸಿ ಅಲ್ಲಿಯ ಸಂತ್ರಸ್ತರಿಗೆ ಚಿಕಿತ್ಸೆ ನಿಡಲಾಗುತ್ತಿದೆ. ಸಾರ್ವಜನಿಕರು ಉದಾರ ನೆರವು ನೀಡಿ, ಅಲ್ಲಿನ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕೆಂದು ಸಂಘಟನೆ ಪರವಾಗಿ ಎಚ್. ದೇಸಾಯಿ ಮನವಿ ಮಾಡಿದ್ದಾರೆ. ಸಹಾಯ ಮಾಡಲು ಸಂಪರ್ಕಿಸಲು ಮೊ-9448357108 ಅಥವಾ 7795687703 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

