ಧಾರವಾಡ

ಕಲಾವಿದರ ಮಾಸಾಶನ ಹೆಚ್ಚಿಸಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 26
ರಂಗಭೂಮಿ, ಸಂಗೀತ, ಜಾನಪದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಸರ್ಕಾರ ನೀಡುತ್ತಿರುವ ಮಾಸಾಶನ ತೀರಾ ಅಲ್ಪ. ಈ ಮೊತ್ತವನ್ನು ಕೂಡಲೇ ಹತ್ತು ಸಾವಿರಕ್ಕೆ ಏರಿಸಬೇಕೆಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು.
ಇಲ್ಲಿನ ಕನ್ನಡ ಕಲಾ ಸೇವಾ ಸಂಘ ಪಂಚಾಕ್ಷರಿ ಗವಾಯಿಗಳ 69ನೇ ಪುಣ್ಯ ಸ್ಮರಣೆ ನಿಮಿತ್ತ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲಾವಿದರು ಸಮಾಜ ಮತ್ತು ಸಮುದಾಯದ ಆಸ್ತಿಯಾಗಿದ್ದು, ತಮ್ಮ ಕಲೆಯ ಮೂಲಕ ಸಂಸ್ಕೃತಿ ಪೋಷಣೆ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಮನ್ನಿಸಿ ಸೌಲಭ್ಯ ನೀಡಿ ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೇ, ಇಲಾಖೆಯನ್ನು ಜಿಲ್ಲಾ ಮಟ್ಟದಿಂದಲೇ ಬಲಪಡಿಸಿ ವಿಕೇಂದ್ರೀಕರಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ, ಸಾಹಿತಿ ಮೋಹನ ನಾಗಮ್ಮನವರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಂಗೂಬಾಯಿ ಹಾನಗಲ್ ಟ್ರಸ್ಟ್ನ ಮನೋಜ ಹಾನಗಲ್, ಪುಟ್ಟರಾಜ ಗವಾಯಿಗಳ ಸಂಘದ ಅಧ್ಯಕ್ಷ ಕೆ. ಕೊಟ್ರೇಶ ಮಾಸ್ತರ, ಎಸ್. ಹಾಲೇಶ, ಪ್ರಭು ಹಂಚಿನಾಳ, ಜಗದೀಶ ರೊಟ್ಟಿಮಠ ಇದ್ದರು.
ಬಳಿಕ ಆಕಾಶವಾಣಿ ಕಲಾವಿದ ವೈ. ಕಾಶೀನಾಥ ಹಾಗೂ ಅಪ್ಪು ಮೇವುಂಡಿ ರಂಗ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸೈಯದ ಮಾಸ್ತರ ಹಾರ್ಮೋನಿಯಂ ಹಾಗೂ ಪ್ರಕಾಶ ದಾವಣಗೇರಿ ತಬಲಾ ಸಾಥ್ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.