ನಕಲಿ ಮೊಬೈಲ್ ಜಾಲ: 10 ಮಂದಿ ಬಂಧನ
ದಾವಣಗೆರೆ/ ಹೊನ್ನಾಳಿ: ನೋಕಿಯಾ, ಸ್ಯಾಮ್ಸಂಗ್ನಂತಹ ಹೆಸರಾಂತ ಕಂಪನಿಗಳ ನಕಲಿ ಮೊಬೈಲ್ಗಳನ್ನು ಮಾರಾಟ ಮಾಡಿ, ಜನರಿಗೆ ವಂಚಿಸುತ್ತಿದ್ದ ಮಹಾರಾಷ್ಟ್ರ ಮೂಲದ 10 ಮಂದಿಯ ತಂಡವನ್ನು ಹೊನ್ನಾಳಿ ಪೊಲೀಸರು ದಾವಣಗೆರೆ ನಗರದ ಲಾಡ್ಜ್ವೊಂದರಲ್ಲಿ ಬಂಧಿಸಿ, 35,500 ರು. ನಗದು, 115 ಮೊಬೈಲ್ ಮತ್ತು ಬಿಡಿ ಭಾಗಗಳು, 5 ಬೈಕ್ ಜಪ್ತು ಮಾಡಿದ್ದಾರೆ.
ಮಹಾರಾಷ್ಟ್ರದ ನವಲ್ಸಿಂಗ್, ಹರಿಸಿಂಗ್ ಪವಾರ್, ದೀಪಕ್ ಜಾಧವ್, ಪೂನಾಲಾಲ್, ಚಂದ್ರಸಿಂಗ್ ಪವಾರ್, ಬ್ಯಾರಿಲಾಲ್ ಜಾಧವ್, ಸುನಿಲ್ ಪವಾರ್, ಲಕ್ಷ್ಮಣ ಜಾಧವ್, ಚಂದನ್ ಜಾಧವ್ ಹಾಗೂ ಬಾಲು ಜಾಧವ್ ಬಂಧಿತ ಆರೋಪಿಗಳು.
ಪೋಲೀಸರ ದಾಳಿ: ಹೊನ್ನಾಳಿ ತಾ. ತರಗನಹಳ್ಳಿ ಗ್ರಾಮದಲ್ಲಿ ನೋಕಿಯಾ ಕಂಪನಿ ಮೊಬೈಲ್ಗಳೆಂಬು ನಂಬಿಸಿ, ತರಕಾರಿ, ಸೊಪ್ಪನ್ನು ಮಾರಿದಂತೆ ಆರೋಪಿಗಳು ಮೊಬೈಲ್ಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ನೋಕಿಯಾ, ಸ್ಯಾಮ್ಸಂಗ್ ಕಂಪನಿ ಹೆಸರಿನಲ್ಲಿ ನಕಲಿ ಮೊಬೈಲ್ಗಳನ್ನು ಮಾರಾಟ ಮಾಡುತ್ತಿದ್ದ ವಿಚಾರವನ್ನು ಆರೋಪಿಗಳು ಬಾಯಿ ಬಿಟ್ಟಿದ್ದರು.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ರಾಜ್ಯವೂ ಸೇರಿದಂತೆ ವಿವಿಧೆಡೆ ವ್ಯವಸ್ಥಿತವಾಗಿ ಹೆಸರಾಂತ ಕಂಪನಿಗಳ ನಕಲಿ ಮೊಬೈಲ್ಗಳನ್ನು ಮಾರಾಟ ಮಾಡುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಆರೋಪಿಗಳು ನೀಡಿದ ಸುಳಿವನ್ನು ಆದರಿಸಿ ದಾವಣಗೆರೆಯ ರತನ್ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿ ನಕಲಿ ಮೊಬೈಲ್ ಮಾರಾಟ ಜಾಲದ
ಇತರೆ ಎಂಟು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದರು.
ಹೊನ್ನಾಳಿ ಸಿಪಿಐ ಹೊನ್ನಪ್ಪ ನೇತೃತ್ವದಲ್ಲಿ ಸಬ್ ಇನ್ಸಪೆಕ್ಟರ್ ಬಿ.ಜಿ. ಕುಮಾರಸ್ವಾಮಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

