ಆರಕ್ಕೇರದ ಮೂರಕ್ಕೆಇಳಿಯದ ಕಾಂಗ್ರೆಸ್, ಜೆಡಿಎಸ್
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ. ಕಳೆದ ಆಡಳಿತಾವಧಿಯಲ್ಲಿ ಕಾಂಗ್ರೆಸ್ಗೆ ಇದ್ದ 22 ಹಾಗೂ ಜೆಡಿಎಸ್ಗೆ ಇದ್ದ 9 ಸ್ಥಾನ ಉಳಿಸಿಕೊಂಡಿವೆ. ಕಳೆದ ಆಡಳಿತಾವಧಿಗೆ ಹೋಲಿಸಿದರೆ ಈ ಎರಡೂ ಪಕ್ಷಗಳಿಗೆ ಸಂಖ್ಯಾಬಲದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ಚುನಾವಣೆಯಲ್ಲಾದರೂ ಎರಡಂಕಿಯ ಸಂಖ್ಯಾಬಲ ದಾಟಬೇಕೆಂದಿದ್ದ ಜೆಡಿಎಸ್ ಆಶಯ ಈಡೇರಲಿಲ್ಲ. ಪಾಲಿಕೆ ಆಡಳಿತ ಚುಕ್ಕಾಣಿಯನ್ನು ಮರಳಿ ಪಡೆಯಬೇಕೆಂಬ ಕಾಂಗ್ರೆಸ್ ಕನಸೂ ನನಸಾಗಲಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವಳಿ ನಗರದಲ್ಲಿ ಮಾಡಿದ್ದ ಪ್ರಚಾರಕ್ಕೆ ಫಲ ದೊರೆಯಲಿಲ್ಲ. ಹೀಗಾಗಿ ಮಹಾನಗರ ಪಾಲಿಕೆ ಸಭಾಭವನದಲ್ಲಿ ಕಳೆದ ಆಡಳಿತಾವಧಿಯಲ್ಲಿ ಪಕ್ಷಗಳು ಅಲಂಕರಿಸಿದ್ದ ಸ್ಥಾನಗಳೇ ಈ ಬಾರಿಯೂ ಮುಂದುವರೆಯಲಿವೆ. ಮೇಯರ್ ಎಡ ಭಾಗದಲ್ಲಿ ಆಡಳಿತ ಬಿಜೆಪಿ, ಬಲಭಾಗದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಎದುರಗಡೆ ಎರಡನೇ ಪ್ರತಿಪಕ್ಷ ಜೆಡಿಎಸ್ ಅಭ್ಯರ್ಥಿಗಳು ಆಸೀನರಾಗಲಿದ್ದಾರೆ. ಎರಡೂ ಪಕ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ಮುಖಗಳೇ ಗೆಲುವು ಸಾಧಿಸಿದ್ದು, ಬೆರಳೆಣಿಕೆಯ ಹೊಸ ಸದಸ್ಯರೂ ಪುರಪಿತೃಗಳಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ಯಾವೊಬ್ಬ ರಾಜ್ಯ ಮುಖಂಡರೂ ಪ್ರಚಾರಕ್ಕೆ ಬಾರದಿದ್ದರೂ ಆ ಪಕ್ಷ ನಷ್ಟವನ್ನೆದುರಿಸದೆ ಕಳೆದ ಆಡಳಿತಾವಧಿಯಲ್ಲಿದ್ದ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲಗೊಂಡಿದೆ. ಎರಡೂ ಪಕ್ಷದ ಪಾಲಿಗೆ ಹಿಂದೆ ಇದ್ದ ಸ್ಥಾನ ಉಳಿಸಿಕೊಂಡಿದ್ದೇ ದೊಡ್ಡ ಹೆಗ್ಗಳಿಕೆಯಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

