ಧಾರವಾಡ

ಧಾರವಾಡ ರಂಗಭೂಮಿಯ ಕಣಜ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 18
ಕಲೆ ಸಮಾಜದಲ್ಲಿ ಶಾಶ್ವತವಾಗಿ ನೆಲೆ ಕಾಣಬೇಕಾದರೆ ಕಲಾವಿದರು, ಕಲಾಭಿಮಾನಿಗಳ ಜೊತೆಗೆ ಕಲಾಪೋಷಕರೂ ಇರಬೇಕು ಎಂದು ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ ಇಲ್ಲಿ ಹೇಳಿದರು.
ಧಾರವಾಡದ ಗ್ರೀನ್ ಆರ್ಮಿ ಮತ್ತು ರಂಗಾಯಣದ ಆಶ್ರಯದಲ್ಲಿ ಟೂರಿಂಗ್ ಟಾಕೀಜ್ ನಾಟಕ ತಂಡದ ಹಾಸ್ಯಭರಿತ 'ಹುಚ್ಚರ ಸಂತೆ' ನಾಟಕ ಉದ್ಘಾಟಿಸಿ ಮಾತನಾಡಿದರು.
ನಾಟಕ ಕಲೆ ತುಂಬಾ ವೆಚ್ಚವಾದದ್ದು. ಒಂದು ನಾಟಕ ಪ್ರದರ್ಶನಗೊಳ್ಳಬೇಕಾದರೆ ಕನಿಷ್ಠ ರು. 15ರಿಂದ 20 ಸಾವಿರ ಖರ್ಚಾಗುತ್ತದೆ. ಕೆಲವು ಕಲಾವಿದರ ಉಪ ಜೀವನ ಕಲೆಯ ಮೇಲೆಯೇ ಅವಲಂಬಿಸಿರುತ್ತದೆ. ಅಂತಹದರಲ್ಲಿ ಉಳ್ಳವರು ಉದಾರ ಮನಸ್ಸಿನಿಂದ ಕಲಾ ಪೋಷಕರಾದರೆ ರಂಗಕಲೆ ಜೀವಂತವಾಗಿಡಲು ಸಾಧ್ಯ.
ಆ ನಿಟ್ಟಿನಲ್ಲಿ ಧಾರವಾಡದಲ್ಲಿ ಕಲಾವಿದರಷ್ಟೇ ಕಲಾಪೋಷಕರು ಅಧಿಕವಾಗಿರುವುದರಿಂದ ಧಾರವಾಡ ರಂಗಭೂಮಿ ಕಣಜ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎಂದರು. ಕಲಾ ಪೋಷಕ ವೀರಯ್ಯ ಚಿಕ್ಕಮಠ ಮಾತನಾಡಿ, ಗ್ರೀನ್ ಆರ್ಮಿಯು ಪರಿಸರ ರಕ್ಷಣೆಯಂತಹ ಕಾರ್ಯ ಮಾಡುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ತೊಡಗಿಕೊಂಡಿರುವುದು ಹೆಮ್ಮೆಪಡುವ ಸಂಗತಿ. ಅವರೊಂದಿಗೆ ನಮ್ಮ ಸಹಕಾರ ಇರುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ಪರಿಸರ ಸಮಿತಿ ಅಧ್ಯಕ್ಷರಾದ ಶಂಕರ ಕುಂಬಿ, ಹೊಟೇಲ್ ಉದ್ದಿಮೆದಾರ ಶ್ರೀಧರ ಶೆಟ್ಟಿ,  ಸೇವಾನಿರತ ಸಂಸ್ಥೆಯ ಅಸ್ಲಾಂಜಹಾನ ಅಬ್ಬಿಹಾಳ, ಪ್ರಸನ್ನ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಲಿಂಗಾರಡ್ಡಿ ತಾರೀಕೊಪ್ಪ, ರಾಜೇಶ ಮನಗುಂಡಿ, ವಿಜಯ ಹೆಸರೂರ, ಪುರಸಂಸ್ಥೆಯ ವಿಜಯ ದೊಡವಾಡ, ಅನೀಲ ಅಳ್ಳೊಳ್ಳಿ, ಸಂತೋಷ ಆನಿಶೆಟ್ಟರ್ ಇದ್ದರು. ಶಿಕ್ಷಕ ಹೂಗಾರ ಪ್ರಾರ್ಥಿಸಿದರು. ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ ಸ್ವಾಗತಿಸಿದರು. ಮಲ್ಲಪ್ಪ ಹೊಂಗಲ ನಿರೂಪಿಸಿದರು. ಮಾರ್ತಾಂಡಪ್ಪ ಕತ್ತಿ ವಂದಿಸಿದರು. ಯುವ ನಿರ್ದೇಶಕ ಉಮೇಶ ತೇಲಿ ಅವರ ಹಚ್ಚರ ಸಂತೆ ನಾಟಕ ನಡೆಯಿತು. ನಾಟಕದ ಪಾತ್ರಧಾರಿಗಳಾದ ಜೋಸೆಫ್ ಮಲ್ಲಾಡಿ, ಮಂಜುನಾಥ ಗುಡ್ಡದವರ, ಉಮೇಶ ಕುಂಬಾರ, ರಂಜಿತಾ ಜಾಧವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.