ಧಾರವಾಡ

ಕೈಲಾಸ ಮಾನಸ ಸರೋವರ ಯಾತ್ರೆ

Published On :

ಹುಬ್ಬಳ್ಳಿ: ಬೆಂಗಳೂರಿನ ನಾರಾಯಣಿ ಹಾಲಿಡೇಸ್ ಜೂನ್ 20 ರಿಂದ 14 ದಿನಗಳ ಕಾಲದ ಕೈಲಾಸ ಮಾನಸ ಸರೋವರ ಯಾತ್ರೆ ಆಯೋಜಿಸಿದೆ. ಬೆಂಗಳೂರಿನಿಂದ ನೇಪಾಳದ ಕಠ್ಮಂಡುವಿಗೆ ಹಾಗೂ ಕಠ್ಮಂಡುವಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಕ್ಕೆ ಆಯೋಜನೆ ಮಾಡಿದೆ. ಯಾತ್ರೆಯಲ್ಲಿ ನುರಿತ ಮಾರ್ಗದರ್ಶಕರೊಂದಿಗೆ ವಸತಿ ಹಾಗೂ ಸಸ್ಯಾಹಾರಿ ದಕ್ಷಿಣ ಭಾರತ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎ.ವಿ. ಮೂರ್ತಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈಲಾಸ ಮಾನಸ ಸರೋವರಗಳು ವಿಶ್ವದ ಕೇಂದ್ರ ಸ್ಥಾನವಾಗಿದ್ದು, ಅಲ್ಲಿಂದಲೇ ಪವಿತ್ರ ನದಿಗಳು ಉಗಮಿಸುತ್ತಿವೆ. ಶಿವನ ಆವಾಸ ಸ್ಥಾನವಾದ ಕೈಲಾಸ ಪರ್ವತ ಹಿಂದೂಗಳಷ್ಟೇ ಅಲ್ಲ ಬೌದ್ಧ, ಜೈನ್, ಬಾನಪೊ ಅನುಯಾಯಿಗಳಿಗೂ ಪವಿತ್ರ ಕ್ಷೇತ್ರ.
ಯಾತ್ರೆ ಆಯೋಜಿಸಿರುವ ಸಂಸ್ಥೆಯು ಜೂನ್ 26ರಂದು ಮಾನಸ ಸರೋವರ ತಟದಲ್ಲಿ ವೇದಬ್ರಹ್ಮ ಡಾ. ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ ಶಕ್ತಿ ಸಹಿತಿ ಮಹಾರುದ್ರಯಾಗ ಹಾಗೂ ಮಹಾಲಕ್ಷ್ಮಿ ಸಮೇತ ಸತ್ಯ ನಾರಾಯಣ ಪೂಜೆಯನ್ನೂ ಆಯೋಜಿಸಿದೆ. ಯಾತ್ರೆ ಪೂರೈಸಿದ ನಂತರ ಯಾತ್ರಾತ್ರಿಗಳಿಗೆ ರಾಜ್ಯ ಸರ್ಕಾರ ರು. 30 ಸಾವಿರ ಧನ ಸಹಾಯ ನೀಡಲಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ನಾರಾಯಣಿ ಹಾಲಿಡೇಸ್ ನಂ. 24 ಬಾಲಾಜಿ ಪ್ಲಾಜಾ, ಕಿರ್ಲೋಸ್ಕರ್ ಕಾಲೋನಿ 2 ನೇ ಹಂತ, ಬಸವೇಶ್ವರ ನಗರ ಈ ವಿಳಾಸಕ್ಕೆ (ಮೊ.9845608096) ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.