ಧಾರವಾಡ

ಹೋಳಿ: ಕಲಘಟಗಿಯಲ್ಲಿ ಶಾಂತಿಸಭೆ

Published On :

ಕಲಘಟಗಿ: ಪಟ್ಟಣದಲ್ಲಿ ಗುರುವಾರ ಜರುಗಲಿರುವ ಹೋಳಿ ಹಬ್ಬದ ಓಕಳಿಯಲ್ಲಿ ಆಸಿಡ್, ಕೆಮಿಕಲ್, ಖಾರದಪುಡಿ ಹಾಗೂ ಯಾವುದೇ ಹಾನಿಕಾರಕ ಬೆರಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಅಮರೇಶ ಬಾರಕೇರ್ ಎಚ್ಚರಿಕೆ ನೀಡಿದರು.
ಭಾನುವಾರ ಸಂಜೆ ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆಸಿದ ಶಾಂತಿಸಭೆಯಲ್ಲಿ ಮಾತನಾಡಿದರು. ಈಗಾಗಲೇ, ಪಟ್ಟಣ ಪಂಚಾಯ್ತಿ ಚುನಾವಣೆಯನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸಿದಂತೆಯೇ ಬರುವ ಹೋಳಿ ಹಬ್ಬವನ್ನೂ ಶಾಂತಿ, ಸೌಹಾರ್ದದಿಂದ ನಡೆಸಬೇಕೆಂದು ಕರೆ ನೀಡಿದರು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ, ಎಸ್.ಐ. ಸುಮಾ ನಾಯ್ಕ, ಪಪಂ ಮಾಜಿ ಅಧ್ಯಕ್ಷ ಶಿವಾಜಿ ವಾಗ್ಮೋಡೆ, ವೃಷಭೇಂದ್ರ ಪಟ್ಟಣಶೆಟ್ಟಿ, ಎಂ.ಐ. ಕಟ್ಟಿ, ಸದಾನಂದ ಚಿಂತಾಮಣಿ, ಅಬ್ದುಲ್ ಕರೀಂ ಟಿನ್ ಮೇಕರ್, ಅಬ್ದುಲ್ ಸತ್ತಾರ ಮಿಶ್ರಿಕೋಟಿ, ಬಾವಾಖಾನ, ನಿಂಗಪ್ಪ ಕಟ್ಟಿಮನಿ, ಹನುಮಂತ ಚವರಗುಡ್ಡ, ಪಪಂ ಸದಸ್ಯ ಗಂಗಾಧರ ಗೌಳಿ, ಬಸಯ್ಯ ಹುಬ್ಬಳ್ಳಿಮಠ, ಮಾದವ ಹಡಪದ, ಗಂಗಾಧರ ಬಳಿಗೇರ, ಮಾರುತಿ ತಹಸೀಲ್ದಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.