ಮಹಿಳೆಯನ್ನು ಗೌರವಿಸಬೇಕು
ಧಾರವಾಡ: ಮಹಿಳೆ ಬಾಳಿನುದ್ದಕ್ಕೂ ತೋರುವ ನಿಷ್ಠೆ, ಸೇವೆ, ಪ್ರೀತಿ-ತ್ಯಾಗಕ್ಕಾಗಿ ಅವರನ್ನು ಗೌರವಿಸಬೇಕು ಎಂದು ಲೇಖಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಮಹಿಳಾ ಮಂಟಪ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಸಿದ್ದ ಸಾಧನೆಯ ಹಿಂದಿನ ಸ್ತ್ರೀ ಶಕ್ತಿ ಅಭಿನಂದನ ಮಾಲೆ-1ರಲ್ಲಿ ಮಾತನಾಡಿದ ಅವರು, ಮಹಿಳೆ, ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ ಹಾಗೂ ಗುರುಮಾತೆಯಾಗಿ ಪುರುಷರಿಗೆ ಹಾಗೂ ಅವರ ಬೇಕು, ಬೇಡಗಳಿಗೆ ಸ್ಪಂದಿಸಿ, ತನ್ನ ಜೀವ ಸವೆಸಿ ನಿಸ್ವಾರ್ಥತನದಿಂದ ಅವರ ಉನ್ನತಿಯಲ್ಲಿಯೇ ಜೀವನದ ಸಾರ್ಥಕತೆ ಕಾಣುತ್ತಾಳೆ ಎಂದರು.
ಲೇಖಕಿ ಡಾ. ಶಾಂತಾ ಇಮ್ರಾಪುರ ಮಾತನಾಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆಗೈದ ಪ್ರತಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇದ್ದೆ ಇರುತ್ತಾಳೆ. ಪ್ರತಿಯೊಬ್ಬ ಮಹಿಳೆಯರು ಮನೆ ಮನೆಯ ತಪಸ್ವಿನಿಯರಾಗಿದ್ದಾರೆ ಎಂದರು. ಇಂದುಮತಿ ಪಾಟೀಲ ಪುಟ್ಟಪ್ಪ ಅವರನ್ನು ಅಭಿನಂದಿಸಲಾಯಿತು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿದರು. ಮಹಿಳಾ ಮಂಟಪ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಲಕ್ಷ್ಮಿ ಚಿಕ್ಕಮಠ, ನಳಿನಾಕ್ಷಿ ಅರಳಗುಪ್ಪಿ, ವತ್ಸಲಾ ಕುಲಕರ್ಣಿ ಹಾಗೂ ಶಾರದಾ ಕೌದಿ ಇದ್ದರು. ಶಾರದಾ ಭಜನಾ ಮಂಡಳ ಹಾಗೂ ಪರಮೇಶ್ವರಿ ಮಹಿಳಾ ಮಂಡಳದ ಸದಸ್ಯರಿಂದ ಸ್ತ್ರೀ ಶಕ್ತಿ ಸ್ತ್ರೋತ್ರ ಹಾಗೂ ತಾಯಿ ಕುರಿತು ಗಾಯನ ಪ್ರಸ್ತುತ ಪಡಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

