ವೈಜ್ಞಾನಿಕ ಅಧ್ಯಯನ ಅವಶ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 30
ಇತಿಹಾಸವನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಬೇಕಾದ ಅಗತ್ಯವಿದೆ. ಹೇಳಿದ್ದಕ್ಕೆಲ್ಲ ತಲೆ ಹಾಕುವ ಬಾಲ ಬಡುಕರು ನಾವಾಗದೇ ಇತಿಹಾಸದ ಗೌರವಕ್ಕೆ ಚ್ಯುತಿ ಬರದಂತೆ ಪ್ರಶ್ನೆ ಮಾಡುವ ಮನೋಭಾವ ಇರಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಎಐಡಿವೈಓ ರಾಜ್ಯಾಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ಇಲ್ಲಿಯ ಜೆಎಸ್ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್.ಕೆ. ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಎನ್ಎಸ್ಎಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಹೀದ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶಾದ್ಯಂತ ಅನೇಕ ಕ್ರಾಂತಿಕಾರಿ ಪಂಥಗಳು ಹುಟ್ಟಿಕೊಂಡಿದ್ದವು. ಈ ದೇಶದ ಬಗ್ಗೆ, ಇಲ್ಲಿಯ ಜನರ ಬಗ್ಗೆ ಕ್ರಾಂತಿಕಾರಿ ವ್ಯಕ್ತಿಗಳಿಗೆ ಅಪಾರವಾದ ಕಾಳಜಿ ಇತ್ತು. ಅಂತೆಯೇ ಹೋರಾಟದ ಪರಂಪರೆಯನ್ನು ಹಾಕಿಕೊಟ್ಟ ಭಗತಸಿಂಗ್ ಅವರಿಗೆ ನಂಬಿದ ಆದರ್ಶಗಳು ಮುಖ್ಯವಾಗಿದ್ದವೆ ಹೊರತು, ಶರಣಾಗತರಾಗಲಿಲ್ಲ ಎಂದು ಹೇಳುವುದರೊಂದಿಗೆ ತಮ್ಮ ಅಸ್ತಿತ್ವಕ್ಕೆ ಕುಂದುಬಂದಾಗ ಬ್ರಿಟೀಷರ ವಿರುದ್ಧ ಹೋರಾಡುವ ಅನಿವಾರ್ಯತೆ ಬಂದೊದಿಗಿತು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎನ್. ಹೆಗಡೆ, ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟೀಷರು, ನಮ್ಮಲ್ಲಿಯ ಸೌಮ್ಯ ಮನೋಭಾವನೆಯರ ಮೇಲೆ ಸವಾರಿಮಾಡಿ, ದೇಶದ ಸಂಪತ್ತನ್ನು ಲೂಟಿ ಮಾಡುವುದನ್ನು ಕಂಡಾಗ ಇದರ ವಿರುದ್ಧ ಸಿಡಿದೆದ್ದವರು ಕ್ರಾಂತಿಕಾರಿ ಭಗತಸಿಂಗ್, ರಾಜಗುರು ಹಾಗೂ ಸುಖದೇವ ಮೊದಲಾದವರು. ಹಿಂದೆ ಅನೇಕ ಜನ ದೇಶದ ಹಿತಕ್ಕಾಗಿ ತ್ಯಾಗ ಮನೋಭಾವ ಹೊಂದಿದವರಾಗಿದ್ದರು. ಇಂದು ಸ್ವಾರ್ಥಕ್ಕಾಗಿ ದೇಶವನ್ನೇ ಕಬಳಿಸುವ ವ್ಯಕ್ತಿಗಳನ್ನು ಕಾಣುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ವಿಷಾದಿಸಿದರು. ಆವಿಷ್ಕಾರ ಫಿಲಂ ಸಂಸ್ಥೆಯ ಎಚ್.ಜೆ. ದೇಸಾಯಿ, ಕ್ರಾಂತಿಕಾರಿ ಹುತಾತ್ಮರ ವ್ಯಕ್ತಿತ್ವ ಕುರಿತು ಮಾತನಾಡಿದರು. ಪ್ರೊ. ಆರ್.ವ್ಹಿ. ಚಿಟಗುಪ್ಪಿ, ಪ್ರೊ. ಟಿ.ಎಂ. ಶ್ರೀಧರ ಉಪಸ್ಥಿತರಿದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶ್ರೇಯಾ ಸುಪ್ಪಣ್ಣವರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

