ಧಾರವಾಡ

ಸುಸೂತ್ರವಾಗಿ ಮುಗಿದ ಮತದಾನ

Published On :

ಧಾರವಾಡ:  ಮತದಾನವಂತೂ ಸುಸೂತ್ರವಾಗಿ ಮುಗಿಯಿತು. ಈಗ ಮತ ಎಣಿಕೆಯತ್ತ ಎಲ್ಲರ ಚಿತ್ತವಿದ್ದು, ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಬುಧವಾರ ನಡೆಯಲಿರುವ ಮತ ಎಣಿಕೆಗೆ ಎಲ್ಲರೂ ಕಾತುರರಾಗಿದ್ದಾರೆ.
ಜಿಲ್ಲೆಯ ಎಲ್ಲ 1,427 ಮತಗಟ್ಟೆಗಳಿಂದ ಈಗಾಗಲೇ ಮತ ಯಂತ್ರಗಳು ಕೃಷಿ ವಿವಿ ಸ್ಟ್ರಾಂಗ್ ರೂಂ ತಲುಪಿದ್ದು, ಪ್ರತಿ ಸ್ಟ್ರಾಂಗ್ ರೂಂಗೆ ಓರ್ವ ಶಸ್ತ್ರಸಜ್ಜಿತ ಸಿಎಆರ್ ಪೇದೆ, ಓರ್ವ ಎಸಿಪಿ, ಓರ್ವ ಸಿಪಿಐ, ನಾಲ್ಕು ಪಿಎಸ್‌ಐ ಹಾಗೂ ಪೇದೆ ಸೇರಿದಂತೆ ಒಟ್ಟು 40 ಜನರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಜೊತೆಗೆ ಒಂದು ಸಿಆರ್‌ಪಿಎಫ್ ಮತ್ತು ಎರಡು ಕೆಎಸ್‌ಆರ್‌ಪಿ ತುಕಡಿ ಕಲ್ಪಿಸಲಾಗಿದೆ. ಬುಧವಾರ ಮತ ಎಣಿಕೆ ದಿನ ಇನ್ನೂ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಎಸಿಪಿ ಎಸ್.ಎಚ್. ಕೇರಿ ಕನ್ನಡಪ್ರಭಕ್ಕೆ ತಿಳಿಸಿದರು.
ಮತ ಎಣಿಕೆಗೆ ಜಿಲ್ಲಾಡಳಿತ ಸಂಪೂರ್ಣ ತಯಾರಿ ನಡೆಸಿದ್ದು, ಮತ ಎಣಿಕೆಗೆ ಹತ್ತಾರು ವಿಭಾಗ ಮಾಡಿ ಎಲ್ಲ ಕೋಣೆಗೆ ಬೇಕಾಗುವ ಟೇಬಲ್, ಕುರ್ಚಿ ಇನ್ನಿತರೆ ವ್ಯವಸ್ಥೆ ಮಾಡಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತ ಎಣಿಕೆ ಒಂದೇ ಕಡೆ ನಡೆಯುವುದರಿಂದ ಮತ ಎಣಿಕೆ ಕೇಂದ್ರದ ಸಿಬ್ಬಂದಿ, ಆಯಾ ಪಕ್ಷದ ಪ್ರತಿನಿಧಿಗಳಿಗೆ ಹಾಗೂ ಮಾಧ್ಯಮದವರಿಗೆ ಗುರುತಿನ ಚೀಟಿ ನೀಡಿದೆ. ಆಯಾ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಮತ ಎಣಿಕೆ ಕೇಂದ್ರದಿಂದ 200 ಮೀಟರ್ ದೂರ ನಿಲ್ಲಬೇಕು.
ನಿಷೇಧಾಜ್ಞೆ ಆದೇಶ: ಮತ ಎಣಿಕೆ ಶಾಂತಿಯುತವಾಗಿ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲ ಆದೇಶ ಹೊರಡಿಸಿದ್ದು, 1973ನೇ ಕಲಂ 20 ಮತ್ತು 144 ಸಿಆರ್‌ಪಿಸಿ ಪ್ರಕಾರ ಅಂದು ಬೆಳಿಗ್ಗೆ 6ರಿಂದ ಮೇ 9ರ ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಹೊರಡಿಸಿದ್ದಾರೆ. ಅಂದು ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಶಾಂತಿ ಕಾಪಾಡಲು ಈ ಆದೇಶ ಹೊರಡಿಸಿದ್ದಾರೆ. ಮತ ಎಣಿಕೆಯ ಸಮಯ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ವೈಮನಸ್ಸು ಉಂಟಾಗುವ ಸಂಭವವಿದ್ದು, ಮೆರವಣಿಗೆ, ಗುಂಪುಗಾರಿಕೆ ಮಾಡಿ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ.
ಮತದಾನದ ವಿವರ: ಜಿಲ್ಲೆಯ ಏಳು ವಿಧಾನಸಭೆಯ ಕ್ಷೇತ್ರಗಳಿಗಾಗಿ ಜರುಗಿದ ಮತದಾನ ಕಾರ್ಯ ಪೂರ್ಣಗೊಂಡಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 4,08,413 ಮಹಿಳೆಯರು (ಶೇ.63.73) ಹಾಗೂ 4,69,944 (ಶೇ. 70.15) ಪುರುಷರು ಸೇರಿದಂತೆ ಒಟ್ಟು 8,7,857 ಮತದಾರರು (ಶೇ.67.01)ರಷ್ಟು ಮತದಾನವಾಗಿದೆ.
ವಿಧಾನ ಸಭಾ ಕ್ಷೇತ್ರವಾರು ಮತ ಚಲಾಯಿಸಿದ ಮಹಿಳಾ, ಪುರುಷ ಹಾಗೂ ಒಟ್ಟು ಮತದಾರರ ಕುರಿತು ನೋಡುವುದಾದರೆ, ನವಲಗುಂದ ಮತಕ್ಷೇತ್ರದಲ್ಲಿ 63,380 ಮಹಿಳೆಯರು (ಶೇ. 71.34 ) ಹಾಗೂ 73,296 (ಶೇ. 78.02) ಪುರುಷರು ಸೇರಿದಂತೆ ಒಟ್ಟು 1,36,676 ಮತದಾರರು (ಶೇ. 74.77) ಮತದಾನವಾಗಿದೆ.
ಕುಂದಗೋಳ ಮತ ಕ್ಷೇತ್ರದಲ್ಲಿ 58,815 ಮಹಿಳೆಯರು (ಶೇ.72.70) ಹಾಗೂ 69,155 (ಶೇ.78.75) ಪುರುಷರು ಸೇರಿದಂತೆ ಒಟ್ಟು 1,27,970 ಮತದಾರರು (ಶೇ. 75.84)ರಷ್ಟು ಮತದಾನವಾಗಿದೆ. ಧಾರವಾಡ ಕ್ಷೇತ್ರದಲ್ಲಿ 62,193 ಮಹಿಳೆಯರು (ಶೇ.69.12) ಹಾಗೂ 70,116 (ಶೇ.75.14) ಪುರುಷರು ಸೇರಿದಂತೆ ಒಟ್ಟು 1,32,309 ಮತದಾರರು (ಶೇ.72.19), ಹು-ಧಾ ಪೂರ್ವ ಕ್ಷೇತ್ರದಲ್ಲಿ 50,348 ಮಹಿಳೆಯರು (ಶೇ.58.57) ಹಾಗೂ 58,348 (ಶೇ.66.03) ಪುರುಷರು ಸೇರಿದಂತೆ ಒಟ್ಟು 1,08,696 ಮತದಾರರು (ಶೇ.62.35), ಹು-ಧಾ. ಸೆಂಟ್ರಲ್ ಕ್ಷೇತ್ರದಲ್ಲಿ 53,667 ಮಹಿಳೆಯರು (ಶೇ. 51.10) ಹಾಗೂ 62,095 (ಶೇ.57.97) ಪುರುಷರು ಸೇರಿದಂತೆ ಒಟ್ಟು 1,15,762 ಮತದಾರರು (ಶೇ.54.57)ರಷ್ಟು ಮತದಾನವಾಗಿದೆ.
ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 59,002 ಮಹಿಳೆಯರು (ಶೇ.53.88) ಹಾಗೂ 66,039 (ಶೇ.59.51) ಪುರುಷರು ಸೇರಿದಂತೆ ಒಟ್ಟು 1,25,041 ಮತದಾರರು (ಶೇ.56.71) ಹಾಗೂ ಕಲಘಟಗಿ ಕ್ಷೇತ್ರದಲ್ಲಿ 60,837 ಮಹಿಳೆಯರು (ಶೇ.75.41) ಹಾಗೂ 70,302 (ಶೇ.80.34) ಪುರುಷರು ಸೇರಿದಂತೆ ಒಟ್ಟು 1,31,139 ಮತದಾರರು (ಶೇ.77.97) ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.