ಧಾರವಾಡ

ಇಂದಿನಿಂದ ಬಸವ ಜಯಂತಿ ಆಚರಣೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 9
ಹುಬ್ಬಳ್ಳಿ ನಗರದ ಮೂರು ಸಾವಿರಮಠದಲ್ಲಿ ಮೇ 10ರಿಂದ 13ರವರೆಗೆ ಬಸವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರವಿಕುಮಾರ ಬಡ್ನಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಸಾವಿರಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮೂರು ದಿನ ಕಾರ್ಯಕ್ರಮ ನಡೆಯಲಿವೆ. ಮೇ 10ರಂದು ಬೆಳಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣ, 10ಕ್ಕೆ ಉಚಿತ ದಂತ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಅಂದು ಸಂಜೆ 6ಕ್ಕೆ ಮೈಸೂರಿನ ನಿರಂತರ ಫೌಂಡೇಷನ್‌ನಿಂದ ಕೂಡಲಸಂಗಮ ದೃಶ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಮೇ 11ರಂದು ಬೆಳಗ್ಗೆ 9ಕ್ಕೆ ಮಕ್ಕಳಿಗಾಗಿ ವಚನ ಕಂಠಪಾಠ ಹಾಗೂ ರಂಗೋಲಿ ಸ್ಪರ್ಧೆ, 10.30ರಿಂದ ಮಧ್ಯಾಹ್ನ 2.30ರವರೆಗೆ ಡಾ. ಸುರೇಶ ಮೆಣಸಗಿ ಅವರ ತಂಡದಿಂದ ಉಚಿತ ನೇತ್ರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಮೇ 12ರಂದು ಬೆಳಗ್ಗೆ 9ಕ್ಕೆ ಬಸವಶ್ವರ ಜಯಂತಿ ನಿಮಿತ್ತ ಮೂರು ಸಾವಿರಮಠದ ಆವರಣದಿಂದ ಬೈಕ್‌ರ್ಯಾಲಿ, 11ಕ್ಕೆ ಉಣಕಲ್‌ನ ಮಂದಮತಿ ಮಹಿಳೆಯರ ಅನುಪಾಲನಾ ಗೃಹದಲ್ಲಿ ಸಮವಸ್ತ್ರ, ವಿಭೂತಿ, ಹಣ್ಣು ಹಂಪಲ ವಿತರಣೆ ನಡೆಯಲಿದೆ. ಸಂಜೆ 4.30ಕ್ಕೆ ಮಹಿಳೆಯರಿಗಾಗಿ ಪಂಚಾಚಾರ್ಯ ಷಟಸ್ಥಲ ಅಷ್ಟಾವರಣ ಕುರಿತು ಆಶುಭಾಷಣ, ಸಂಜೆ 6ಕ್ಕೆ ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡ ಜಗಜ್ಯೋತಿ ಬಸವೇಶ್ವರ ಚರಿತ್ರೆಯನ್ನು ಯಕ್ಷಗಾನದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಮೇ 13ರಂದು ಬೆಳಗ್ಗೆ 9ಕ್ಕೆ ಹಳೇಬಸ್ ನಿಲ್ದಾಣದ ಬಳಿಯ ಬಸವ ವನದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಮಧ್ಯಾಹ್ನ 4ಕ್ಕೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ, ದಾಜಿಬಾನ ಪೇಟೆ, ಮ್ಯಾದಾರ ಓಣಿ, ಬ್ರಾಡವೇ, ದುರ್ಗದ ಬೈಲ್, ರಾಧಾಕೃಷ್ಣ ಗಲ್ಲಿ, ವಿರಾಪುರ ರೋಡ್, ಬಡಿಗೇರ ಓಣಿ, ಸಿಂಪಿಗಲ್ಲಿ ಮುಖಾಂತರ ಶಾಂತಿನಾಥ ಭವನ, ಮಹಾವೀರಗಲ್ಲಿ ಮುಖಾಂತರ ಮೂರು ಸಾವಿರಮಠಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳಾದ ವೀರಣ್ಣ ಕಲ್ಲೂರ, ಈಶ್ವರ ಶಿರಸಂಗಿ, ಸಿ.ಎಚ್. ಗೊಬ್ಬಿ, ಚಂದ್ರಶೇಖರ ಅಳಗುಂಡಗಿ, ಈರಣ್ಣ ಎಮ್ಮಿ, ಅನಸೂಯ ಅರಕೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.