ಧಾರವಾಡ

ಉಚಿತ ಬೇಸಿಗೆ ಶಿಬಿರ ಸಮಾರೋಪ

Published On :

ಧಾರವಾಡ: ಗಾಂಧಿ ಚೌಕ ಹಾಗೂ ಭೂಸ ಓಣಿಯ ಸಮಸ್ತ ಬಾಗವಾನ ಯಂಗ ಕಮಿಟಿ ಹಾಗೂ ಮದನಿಮಿಯಾ ಅರಬಿ ಮದರಸಾ ಮೋಹದ್ದೀಸೆ ಆಜಂ ಮಿಶನ ಯಂಗ್ ಕಮಿಟಿ ಜಂಟಿಯಾಗಿ ಒಂದು ತಿಂಗಳು ಮಕ್ಕಳಿಗೆ ಉಚಿತ ಶಿಬಿರ ನಡೆಸಲಾಯಿತು.
ಶಿಬಿರಾರ್ಥಿಗಳಿಗೆ ಮೌಲನಾ ಸೈಯದ ಅಲ್ತಾಪ ಹುಸೇನ ಅಶ್ರಫೀ ಮತ್ತು ಮೌಲಾನಾ ಕೌಸರ ಆಲಂ ಇವರು ಮಕ್ಕಳಿಗೆ ಪವಿತ್ರ ಖುರಾನ ಪಠಣ ತರಬೇತಿ ನೀಡಿದರು. ಮುಕ್ತಾಯ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಪಠ್ಯ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು.
ಅಧ್ಯಕ್ಷರಾದ ಜನಾಬ ಜಿಯಾ ಉಲ್ಲಾ ಜಾಗೀರದಾರ, ಕಾರ್ಯದರ್ಶಿ ಅತಾ ಉಲ್ಲಾ ಮಕಾನದಾರ, ಮಲಿಕ ಜಾನ ಬಾಗವಾನ ಮತ್ತು ಶೂಕೂರ ಅಹ್ಮದ ಸೂರಣಗಿ, ಇರ್ಫಾನ ಮಿರ್ಜಕರ, ಹಾರೂನ ಕಿತ್ತೂರ ಇದ್ದರು. ಮೌಲಾನಾ ಮಹಮ್ಮದ ಉಮರ ಅಶ್ರಫೀ ನಿರೂಪಿಸಿ, ಪ್ರವೇಜ ಬರ್ಚೆವಾಲೆ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.