ಧಾರವಾಡ

ಮೂರು ಬಾಲ್ಯ ವಿವಾಹಕ್ಕೆ ತಡೆ

Published On :

ಕ.ಪ್ರ.ವಾರ್ತೆ ,   ಧಾರವಾಡ ,   ಮೇ 30
ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆಯುತ್ತಿದ್ದ ಮೂರು ಬಾಲ್ಯ ವಿವಾಹಗಳನ್ನು ವಿವಿಧ ಇಲಾಖೆ ಅಧಿಕಾರಿಗಳು ಗುರುವಾರ ತಡೆದಿದ್ದಾರೆ.
ತಾಲೂಕಿನ ಜೋಗೆಲ್ಲಾಪುರದ ಒಂದೇ ಸ್ಥಳದಲ್ಲಿ ಎರಡು ಜೋಡಿಗಳಿಗೆ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ಎಸ್. ಅಪ್ಪಣ್ಣವರ, ಮಕ್ಕಳ ರಕ್ಷಣಾ ಘಟಕದ ನಿಂಗಪ್ಪ ಮಡಿವಾಳರ, ವಿನಯಾ ಬಿಗನಿ ಹಾಗೂ ಮಕ್ಕಳ ಸಹಾಯವಾಣಿ 1098 ರವಿ ಭಂಡಾರಿ ದಾಳಿ ನಡೆಸಿ ಬಾಲ್ಯ ವಿವಾಹಕ್ಕೆ ತಡೆಯೊಡ್ಡಿದ್ದಾರೆ.
ಈ ವೇಳೆ ಪರಿಶೀಲನೆ ನಡೆಸಿದಾಗ ಎರಡೂ ಮದುವೆಯಲ್ಲಿ 15 ವರ್ಷದ ಬಾಲಕಿಯರಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಆದ್ದರಿಂದ ಊರಿನ ಗಣ್ಯರು ಹಾಗೂ ಪಾಲಕರಿಗೆ ಬಾಲ್ಯವಿವಾಹ ಕಾಯ್ದೆ ಕುರಿತು ಹೆಚ್ಚಿನ ಮಾಹಿತಿ ನೀಡಿ ಇವರಿಗೆ 18 ವರ್ಷ ತುಂಬುವವರೆಗೂ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಂಡು ಮದುವೆಗಳನ್ನು ತಡೆದರು.
ಇದೇ ರೀತಿ ತಾಲೂಕಿನ ಬೆಳ್ಳಿಗಟ್ಟಿಯಲ್ಲಿ 16 ವರ್ಷದ ಬಾಲಕಿಯೊಂದಿಗೆ ಆಗುತ್ತಿದ್ದ ಮದುವೆ ತಡೆಯಲಾಗಿದ್ದು, ವಧುವಿನ ಪಾಲಕರು ಹಾಗೂ ವರ, ವರನ ತಂದೆಯಿಂದಲೂ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.