ಪಿಎಚ್ಡಿ ಪದವಿ ಪ್ರದಾನ
ಹುಬ್ಬಳ್ಳಿ: ಇಲ್ಲಿನ ಕೆ.ಎಸ್. ಜಿಗಳೂರು ಕಲಾ ಶ್ರೀಮತಿ ಎಸ್.ಎಂ. ಶೇಷಗಿರಿ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕಿ ರಾಜೇಶ್ವರಿ ಎಂ. ಶೆಟ್ಟರ್ ಅವರು ಮಂಡಿಸಿದ ಸೋಷಿಯೋ ಎಕನಾಮಿಕಲ್ ಇಂಫ್ಯಾಕ್ಟ್ ಆಫ್ ಕಮರ್ಷಿಯಲ್ ಬ್ಯಾಂಕ್ಸ್ ಡ್ಯೂರಿಂಗ್ ಓಪನ್ ರಿಜಿಮ್: ಎ ಕೇಸ್ ಸ್ಟಡೀಸ್ ಆಫ್ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ ಪ್ರಬಂಧಕ್ಕೆ ಕರ್ನಾಟಕ ವಿವಿ ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ಕರ್ನಾಟಕ ವಿವಿ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಎಸ್.ಎಸ್. ಹೂಗಾರ ಅವರು ರಾಜೇಶ್ವರಿ ಶೆಟ್ಟರ್ ಅವರಿಗೆ ಮಾರ್ಗದರ್ಶನ ಮಾಡಿದ್ದರು.
ಇಂದು ಸಾಂಕೇತಿಕ ಉಪವಾಸ
ಧಾರವಾಡ: ಇತ್ತೀಚೆಗೆ ನಗರದ ಶೆಟ್ಟರ್ ಕಾಲೋನಿಯಲ್ಲಿ ಹತ್ತು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ರಾಜ್ಯ ಸಂಘಟಿತ ಕೂಲಿ ಕಾರ್ಮಿಕರ ವೆಲ್ಫೇರ್ ಯೂನಿಯನ್ ಮನೆ ಪಾತ್ರೆ, ಬಟ್ಟೆ ತೊಳೆಯುವ ಕೂಲಿ ಕಾರ್ಮಿಕರ ಮಹಾಸಂಘ ಜಂಟಿಯಾಗಿ ಜೂ. 1ರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಯೂನಿಯನ್ ತಂಡವು ಶುಕ್ರವಾರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮನೆಗೆ ಹೋಗಿ ಸಾಂತ್ವಾನ ಹೇಳಲಾಯಿತು. ಅಲ್ಲದೇ, ಅತ್ಯಾಚಾರ ಮಾಡಿದ ಯಲ್ಲಪ್ಪ ಶಿವಪ್ಪನವರಿಗೆ ಗಲ್ಲಿಗೆ ಏರಿಸಬೇಕೆಂದು ಸಂಘದ ಅಧ್ಯಕ್ಷ ವಿಜಯಲಕ್ಷ್ಮಿ ಸುಳ್ಳೊಳ್ಳಿ, ಮಂಜುಳಾ ಲೊಂಡೆ, ಶಿವಪ್ಪ ಸಿಂಗಾಡಿ, ಮೆಹಬೂಬಸಾಬ ಚಪ್ಪರಬಂದ, ರೇಣುಕಾ ಸಿಂಗಾಡಿ, ಶೋಭಾ ವಾಲ್ಮೀಕಿ ಮತ್ತಿತರರು ಆಗ್ರಹಿಸಿದರು.
ಬೈಕ್ ಡಿಕ್ಕಿ: ಓರ್ವ ಸಾವು
ಧಾರವಾಡ: ನವಲಗುಂದ ತಾಲೂಕಿನ ಮೊರಬ ಗ್ರಾಮದಿಂದ ಬೈಕ್ ಮೇಲೆ ಅಮ್ಮಿನಬಾವಿಗೆ ತೆರಳುತ್ತಿದ್ದಾಗ ಓಮ್ಮಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ನವಲಗುಂದ ತಾಲೂಕಿನ ಮೊರಬ ಗ್ರಾಮದ ಗದಿಗೆಪ್ಪ ಹನಮಂತಪ್ಪ ಮಡಿವಾಳರ (60) ಸಾವನ್ನಪ್ಪಿದ್ದು, ಬೈಕ್ ಸವಾರ ನಾಗಪ್ಪ ಮಡಿವಾಳರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮೀಣ ಠಾಣಾ ಪಿಎಸ್ಐ ಸುರೇಶ ಯಳ್ಳೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕ ನೀರುಪಾಲು
ಹುಬ್ಬಳ್ಳಿ: ಹೊಂಡದಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಛಬ್ಬಿ ಬಳಿಯ ಬೆಟದೂರು ಗ್ರಾಮದಲ್ಲಿ ಸಂಭವಿಸಿದೆ. ಬೆಟದೂರು ಗ್ರಾಮದ ನೂರ್ ಅಹ್ಮದ್ ಮೆಹಬೂಬ್ಸಾಬ್ ಮುಲ್ಲಾ (11) ಎಂಬ ಬಾಲಕ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

