ಧಾರವಾಡ

ಲೋಕಾ ಬಲೆಗೆ ಪೊಲೀಸ್ ಪೇದೆ

Published On :

ಧಾರವಾಡ: ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ನಗರದ ವಿದ್ಯಾಗಿರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ವಿದ್ಯಾಗಿರಿ ಠಾಣೆಯ ಅಂದಪ್ಪ ಯಲ್ಲಪ್ಪ ಗದಗ ಎಂಬಾತನೇ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಕಳೆದ ಅ. 28ರಂದು ಕೃಷ್ಣಮೂರ್ತಿ ಎಂ.ಟಿ. ಹಾಗೂ ಅವರ ಪತ್ನಿಯ ಮಧ್ಯೆ ಕೌಟುಂಬಿಕ ಕಲಹ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿಯವರ ಪತ್ನಿ ವಿದ್ಯಾಗಿರಿ ಠಾಣೆಗೆ ದೂರು ಸಲ್ಲಿಸಿದ್ದರು. ಈ ಕುರಿತು ಠಾಣೆಯ ಸಿಪಿಐ ಕೌಟುಂಬಿಕ ಕಲಹವನ್ನು ಬಗೆಹರಿಸಿದ್ದರು. ಆದರೆ, ಕೃಷ್ಣಮೂರ್ತಿ ಬೆನ್ನುಬಿದ್ದ ಅಂದಪ್ಪ ರು. 9 ಸಾವಿರ ನೀಡುವಂತೆ ಒತ್ತಾಯಿಸುತ್ತಿದ್ದ. ಒಂದು ವೇಳೆ ಹಣ ನೀಡದಿದ್ದರೆ ನಿನ್ನ ವಿರುದ್ಧ ದೂರು ದಾಖಲಿಸುವುದಾಗಿ ಕೃಷ್ಣಮೂರ್ತಿಗೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಬೇಸತ್ತ ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಮೊದಲನೇ ಕಂತಿನ ರೂಪದಲ್ಲಿ ರು. 6 ಸಾವಿರ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಂದಪ್ಪನನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಪರಶುರಾಮ, ಡಿಎಸ್‌ಪಿ ಶಿವಳ್ಳಿ, ಇನ್‌ಸ್ಪೆಕ್ಟರ್ ಎನ್.ಎಚ್. ಬಿದರಿ ಇದ್ದರು.

ಇಂದು ಸಮೂಹ ನಾಡಗೀತೆಗಳು
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು 58ನೇ ರಾಜ್ಯೋತ್ಸವ ಮಾಸಾಚರಣೆ ಕನ್ನಡ ಹಬ್ಬ ನಿಮಿತ್ತ ನ. 6ರ ಸಂಜೆ 5.30ಕ್ಕೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ, ಕಲಾರ್ಪಣ ಕಲ್ಚರಲ್ ಅಕಾಡೆಮಿ ವತಿಯಿಂದ ನೃತ್ಯ, ಸಾಂಸ್ಕೃತಿಕ ಮಹಿಳಾ ಸಮೂಹ ನಾಡಗೀತೆಗಳ ಹಾಡುಗಾರಿಕೆ ಏರ್ಪಡಿಸಿದೆ.
ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ನುಡಿ ಚಿಂತನೆ ನಡೆಸಿಕೊಡುವರು. 6.30ಕ್ಕೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಸಾಹಿತ್ಯ ಚೇತನಗಳ ಜನ್ಮ ಶತಮಾನೋತ್ಸವ ಸ್ಮರಣೆ ಅಂಗವಾಗಿ ಬೀಚಿ ಕುರಿತಾಗಿ ಮಾತನಾಡಲು ಬೆಂಗಳೂರಿನ ಶಾ.ಮಂ. ಕೃಷ್ಣರಾಯ ಮತ್ತು ಗಂಗಾವತಿ ಬಿ. ಪ್ರಾಣೇಶ ಮಾತನಾಡುವರು. ಸಂಯೋಜಕರಾಗಿ ಅನಿಲ ದೇಸಾಯಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.