ಸಾಂಸ್ಕೃತಿಕ ಕಾರ್ಯಕ್ರಮ
ಹುಬ್ಬಳ್ಳಿ: ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿ ನಿಮಿತ್ತ ಎಸ್‌ಎಸ್‌ಕೆ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸ್‌ಎಸ್‌ಕೆ ಸಮಾಜದ ಮುಖ್ಯಧರ್ಮದರ್ಶಿ ಗಿರಿಧರಸಾ ಕಾಟಿಗರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸಮಾಜದ ಯುವಕರು ಒಗ್ಗಟ್ಟಿನಿಂದ ಆಚರಿಸಬೇಕು ಎಂದರು. ಕೇಂದ್ರ ಪಂಚ ಸಮಿತಿಯ ಉಪಮುಖ್ಯ ಧರ್ಮದರ್ಶಿ ಎಫ್.ಕೆ. ದಲಭಂಜನ, ಭಾಸ್ಕರ ಜಿತೂರಿ, ಸಹಗೌರವ ಕಾರ್ಯದರ್ಶಿ ಎಚ್.ಜಿ. ನಿರಂಜನ, ಕೋಶಾಧಿಕಾರಿ ವೈ.ಎನ್. ಲದವಾ, ಮಾಜಿ ಶಾಸಕ ಅಶೋಕ ಕಾಟವೆ, ಕೆಪಿಸಿಸಿ ಸದಸ್ಯ ಸತೀಶ ಮೆಹರವಾಡೆ, ಕಿಟ್ಟು ಲದವಾ, ರಾಜಶ್ರೀ ಜಡಿ, ಸರಳಾ ಭಾಂಡಗೆ ಇದ್ದರು.
14ರಂದು ಚಿತ್ರಕಲೆ ಸ್ಪರ್ಧೆ
ಹುಬ್ಬಳ್ಳಿ: ಡಿ.ಜಿ. ಶೆಟ್ಟಿ ಎಜ್ಯುಕೇಷನ್ ಸೊಸೈಟಿ ಮತ್ತು ಹೆಸ್ಕಾಂ ಸಹಯೋಗದಲ್ಲಿ ನ. 14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಡಾ.ಡಿ.ಜಿ. ಶೆಟ್ಟಿ ಎಜ್ಯುಕೇಷನಲ್ ಸೊಸೈಟಿ, ಕೆಎಂಎಫ್ ಹತ್ತಿರ ಇಲ್ಲಿ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಅಪಾಯರಹಿತ ವಿದ್ಯುತ್ ಬಳಕೆ, ವಿದ್ಯುತ್ ಉತ್ಪಾದನೆ ನೈಸರ್ಗಿಕ ಮೂಲಗಳು, ವಿದ್ಯುಚ್ಛಕ್ತಿ ಉಳಿತಾಯ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಒಂದು ಚಿತ್ರವನ್ನು ಮಕ್ಕಳು ಸ್ಥಳದಲ್ಲಿಯೇ ಬಿಡಿಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅಂದು ಸಂಜೆ ನಡೆಯುವ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು. ನ. 13 ಹೆಸರು ನೋಂದಣಿಗೆ ಕೊನೆ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ 0836-2465327, 93434 00038ನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

