ಧಾರವಾಡ

ಮಕ್ಕಳ ದಿನಾಚರಣೆ ಸಂಭ್ರಮ

Published On :

ಹುಬ್ಬಳ್ಳಿ: ನಗರದ ವಿವಿಧೆಡೆ ಸಂಭ್ರಮದಿಂದ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಹಿರಿ ಹಿಗ್ಗಿದರು.
ಇಲ್ಲಿನ ಸ್ಪಂದನ ಫೌಂಡೇಶನ್, ಹುಬ್ಬಳ್ಳಿಯ ಆರೂಢ ಅಂಧ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ನಿವೃತ್ತ ಶಿಕ್ಷಕ ಡಿ.ಜಿ. ಗೋಳಸಂಗಿ, ಮಕ್ಕಳಿಗೆ ಸದ್ಗುಣ ಕಲಿಸಿಕೊಡಬೇಕು. ಮಕ್ಕಳಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸ್ಪಂದನ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಸ್ಪಂದನ ಫೌಂಡೇಶನ್ ಅಧ್ಯಕ್ಷ ರಾಮನಾಥ ಶೆಣೈ,  ನವೀದ ಮುಲ್ಲಾ, ನಾಗರಾಜ್ ನಾಯ್ಕ, ಪ್ರೀತಿ ಪಂಡಿತ, ವಿಜಯಲಕ್ಷ್ಮಿ ಪೈ, ರಫೀಕ ಚವ್ಹಾಣ, ಶೀಲಾ ನಾಯ್ಕ, ನವೀನಕುಮಾರ ಗೌಡರ ಇದ್ದರು.
ಕಿಡ್ಜ್ ವರ್ಲ್ಡ್: ಮಂಜುನಾಥ ನಗರದ ರಾಧಾಕೃಷ್ಣ ಅಕಾಡೆಮಿ ಆಪ್ ಪ್ಯೆನ್ ಆರ್ಟ್ಸ್ ಮತ್ತು ಎಜ್ಯುಕೇಶನ್ ಸಂಸ್ಥೆಯ ಕಿಡ್ಜ್ ವರ್ಲ್ಡ್ ಶಾಲೆಯ ರಾಧಾಬಾಯಿ ಸಭಾಭವನದಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಿಡ್ಜ್‌ವರ್ಲ್ಡ್‌ನ ಮಕ್ಕಳು ಪಂಡಿತ ನೆಹರು ಅವರ ವೇಷಭೂಷಣ ಧರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಮನೀಷ ಶಿಂಧೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೇರಣಾ ಶಿಂಧೆ, ಸ್ವಾತಿ ಜಾಧವ, ನಸೀಮ ಮುಲ್ಲಾ, ದ್ರಾಕ್ಷಾಯಿಣಿ ಹಲಗತ್ತಿ, ವಿಮಲಾಕ್ಷಿ ಪರಕಟ್ಟಿ, ಮಿಥುನಕುಮಾರ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಖಾಂಬರಿ ಸಂಸ್ಥೆ: ಬೆಂಗೇರಿ ಉದಯನಗರ ಶಾಖಾಂಬರಿ ವಿದ್ಯಾ ಸಂಸ್ಥೆಯ ಶಾಂತಮ್ಮ ಹೂಗಾರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಸಂಸ್ಥೆಯ ಚೇರ್‌ಮನ್ ಸರೋಜಾ ಹೂಗಾರ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಲಾಯನ್ಸ್ ಕ್ಲಬ್ ಆಫ್ ಇಂಟರ್‌ನ್ಯಾಶನಲ್ ಕಾರ್ಯದರ್ಶಿ ರಾಜೇಂದ್ರ ಕಾಲಕೇರಿ, ಶಿಕ್ಷಕಿಯರಾದ ಲಕ್ಷ್ಮಿ, ಬಿಂದು, ಶ್ರುತಿ ಮತ್ತಿತರರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.