ಧಾರವಾಡ

ಜಿಮಖಾನಾ ಮೈದಾನದ ವರದಿ ನೀಡಿ

Published On :

ಹುಬ್ಬಳ್ಳಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುವುದರೊಳಗೆ ಜಿಮಖಾನಾ ಮೈದಾನದ ಕುರಿತು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಅವರು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸ್ಪೋರ್ಟ್ಸ್ ಗ್ರೌಂಡ್ ಸಮಿತಿ ಒತ್ತಾಯಿಸಿದೆ.
ಗ್ರೌಂಡ್ ಬಚಾವೋ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಅವರು ಮೂರು ದಿನಗಳಲ್ಲಿ ಸ್ಪೋರ್ಟ್ಸ್ ಗ್ರೌಂಡ್ ಕುರಿತ ವಸ್ತುಸ್ಥಿತಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಜಿಲ್ಲಾಧಿಕಾರಿ ಅವರು ಇವರೆಗೂ ಇನ್ನೂ ವರದಿ ಸಲ್ಲಿಸಿಲ್ಲ.  ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಉ-ಕದ ಅಭಿವೃದ್ಧಿಗೆ ಕುರಿತಂತೆ ಚರ್ಚಿಸುವುದಕ್ಕೆ ಆದ್ಯತೆ ನೀಡಲಾಗಿದ್ದು, ಆದ್ದರಿಂದ ಜಿಲ್ಲಾಧಿಕಾರಿ ಶುಕ್ಲ ಅವರು ಅಧಿವೇಶನ ಆರಂಭಕ್ಕೆ ಮುನ್ನ ಸರ್ಕಾರಕ್ಕೆ ವರದಿ ಸಲ್ಲಿಸಿದರೆ, ವರದಿಯ ಆಧಾರದ ಮೇಲೆ ಸಂಸತ್ತಿನಲ್ಲಿ ಚರ್ಚಿಸಬಹುದಾಗಿದೆ ಎಂದು ಸಭೆಯಲ್ಲಿ ಅನಿಸಿಕೆ ವ್ಯಕ್ತಪಡಿಸಲಾಯಿತು.  
ಸಭೆಯಲ್ಲಿ ವೆಂಕಟೇಶ ಸವದತ್ತಿ, ಕಾಡಯ್ಯ ಹಿರೇಮಠ, ಹೂವಪ್ಪ ದಾಯಗೋಡಿ, ಶರದ ಭಗತ, ಶೀಲಾ ಮಿರ್ಜಿ, ಅನಿತಾ ಗುಂಜಾಳ, ಪಿ.ಜಿ. ಪವಾರ, ಬಸವರಾಜ ತೇರದಾಳ, ವಿಡಿ ಜಾಧವ, ಶೈಲೇಂದ್ರ ಕುಮಾರ ಪಾಟಿಲ, ಪ್ರಕಾಶ ಕುರಟ್ಟಿ, ಶಂಕರ ಕೇದಾರಿ. ಎನ್.ಕೆ. ಮುಗಳಿ ಅಮೃತ ಇಜಾರಿ ದೀಪಕ ಶಿರೋಳಿಕರ, ವೇದವ್ಯಾಸ ಕೌಲಗಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.