ಬೆಳ್ಳಿ ಕಿರೀಟ, ನಗದು ಕಳ್ಳತನ
ಹುಬ್ಬಳ್ಳಿ: ಗೋಕುಲ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ವಿಗ್ರಹದ ಮೇಲೆ ಇದ್ದ 40 ತೊಲೆ ಬೆಳ್ಳಿ ಕಿರೀಟ ಮತ್ತು 2 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ. ಗೋಕುಲ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಮೂರ್ತಿಗೆ ಹಾಕಲಾಗಿದ್ದ ಬೆಳ್ಳಿ ಕಿರೀಟ ಮತ್ತು ರಾಮಕೃಷ್ಣ ನಗರದಲ್ಲಿನ ರಾಘವೇಂದ್ರ ಸ್ವಾಮಿ ಮಠದ ಬಾಗಿಲು ಮುರಿದು ಕಳ್ಳರು ಅಲ್ಮೇರಾದಲ್ಲಿ ಇರಿಸಿದ್ದ 2 ಸಾವಿರ ನಗದು ದೋಚಿದ್ದಾರೆ. ಲಾಕರ್ ತೆರೆಯುವುದಕ್ಕೆ ಮಾಡಿದ ಕಳ್ಳರ ಪ್ರಯತ್ನ ಸಫಲವಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ, ಡಿಸಿಪಿ ಸುಭಾಷ ಗುಡಿಮನಿ, ಶ್ರೀನಾಥ ಜೋಶಿ, ಇನ್ಸ್ಪೆಕ್ಟರ್ ಪ್ರಭುಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸರಗಳ್ಳತನ: ಇಬ್ಬರ ಬಂಧನ
ಧಾರವಾಡ: ನಗರದ ವಿವಿಧೆಡೆ ಸರಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ದಾಂಡೇಲಿ ಮೂಲದ ಮುಸ್ತಾಕ ಆದಂಸಾಬ ಸನದಿ ಮತ್ತು ಸುಲ್ತಾನಹುಸೇನಸಾಬ ನದಾಫ್ ಎಂಬುವರೇ ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಚಿನ್ನದ ಮಾಂಗಲ್ಯ ಮತ್ತು ರು. 20 ಸಾವಿರ ನಗದು ಸೇರಿದಂತೆ ಅಂದಾಜು ರು. 2ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿತರು ರಜತಗಿರಿಯಲ್ಲಿ ಎರಡು ಕಡೆ, ಯುಬಿಹಿಲ್ ಬಳಿ ಮತ್ತು ಆನಂದಕಂದ ನಗರಗಳಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

