ಧಾರವಾಡ

ಧರ್ಮ, ವಿಜ್ಞಾನ ನಾಣ್ಯದ 2 ಮುಖ

Published On :

ಧಾರವಾಡ: ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ದುರ್ದೈವಕ್ಕೆ ಇವು ವಿವಿಧೆಡೆ ಮುಖ ಮಾಡುತ್ತಿವೆ ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ೤ ರಾಜಶೇಖರ ಭೂಸನೂರಮಠ ಅಭಿಪ್ರಾಯಪಟ್ಟರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ಆಯೋಜಿಸಿದ್ದ ಪ್ರೊ೤ ಎಎಂಎಚ್ ಸಿದ್ಧಲಿಂಗಯ್ಯ ಅವರ ಶಿವಶಕ್ತಿ ಮತ್ತು ಕ್ವಾಟಂ ಮೆಕ್ಯಾನಿಕ್ಸ್ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರಸಕ್ತ ವಿಜ್ಞಾನ ಕಾಲದಲ್ಲಿ ಧರ್ಮ ಮರೆಯುವುದನ್ನು ನೋಡುತ್ತಿದ್ದೇವೆ. ಪಾಶ್ಚಾತ್ಯರು ವಿಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ ಅವರು ಧರ್ಮ ಮತ್ತು ಆಧ್ಯಾತ್ಮದ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಆದರೆ, ಪ್ರಸ್ತುತ ಧರ್ಮದ ಕೆಲವೊಂದು ಪ್ರಶ್ನೆಗಳು, ನಿಗೂಢಗಳಿಗೆ ವಿಜ್ಞಾನ ನಿರುತ್ತರವಾಗಿದೆ ಎಂದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ೤ ಯು.ಎಸ್. ರಾಯಕರ ಮಾತನಾಡಿ, ಮೊದಮೊದಲು ಧರ್ಮವು ವಿಜ್ಞಾನದ ಮೇಲೆ ಪ್ರಹಾರ ನಡೆಸಿತು. ಈಗ ವಿಜ್ಞಾನ ಧರ್ಮದ ಮೇಲೆ ಪ್ರಹಾರ ನಡೆಸುತ್ತಿದೆ. ವಿಜ್ಞಾನ ಮತ್ತು ಧರ್ಮ ಸಮನ್ವಯತೆಯಿಂದ ಸಾಗಬೇಕು. ಏಕೆಂದರೆ ಇವೆರಡರ ಉದ್ದೇಶವು ಸತ್ಯದ ಅನ್ವೇಷಣೆ ಆಗಿದೆ. ವಿಜ್ಞಾನ ಹಾಗೂ ಆಧ್ಯಾತ್ಮ ಎರಡರಲ್ಲೂ ಸುಳ್ಳಿಗೆ ಸ್ಥಾನವಿಲ್ಲ ಎಂದು ತಿಳಿಸಿದರು. ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ೤ ಎಸ್.ಎಂ. ವೃಷಭೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿವಶಕ್ತಿ ಮತ್ತು ಕ್ವಾಂಟಂ ಮೆಕ್ಯಾನಿಕ್ಸ್ ಕರ್ತೃ ಪ್ರೊ೤ ಎಎಂಎಚ್ ಸಿದ್ಧಲಿಂಗಯ್ಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ ಸ್ವಾಗತಿಸಿದರು. ಡಾ೤ ಚಂದ್ರಶೇಖರ ಓಶಿಮಠ ಪ್ರಾರ್ಥಿಸಿದರು. ಶಿಕ್ಷಕ ಸಾಹಿತಿ ಲಿಂಗರಾಜ ರಾಮಾಪುರ ನಿರೂಪಿಸಿದರು. ಶಿಕ್ಷಕ ವೀರಣ್ಣ ಒಡ್ಡೀನ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.