ಕಳಸಾ-ಬಂಡೂರಿ ನಾಲಾ ಜೋಡಿಸಿ
ನವಲಗುಂದ: ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕೆಂದು ತಾಲೂಕಿನ ನ್ಯಾಯವಾದಿಗಳ ಸಂಘ ತಹಸೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸೋಮವಾರದಂದು ತಾಲೂಕಿನ ರೈತರ ಸಮಸ್ಯೆಗಳಿಗೆ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿ ಪ್ರಾರಂಭಿಸಲು ತಾಲೂಕಿನ ನ್ಯಾಯವಾದಿಗಳ ಸಂಘದಿಂದ ಶಿರಸ್ತೇದಾರ ಡಿ.ಕೆ. ಕಟ್ಟಿಯವರಿಗೆ ಮನವಿ ಸಲ್ಲಿಸಿದರು.
ನಾಲಾ ಜೋಡನೆ ಕಾಮಗಾರಿಯಿಂದ ಸಾವಿರಾರು ಎಕರೆ ಜಮೀನುಗಳಿಗೆ ನೀರು ಅವಶ್ಯವಾಗಿರುತ್ತದೆ. ಅನೇಕ ತಾಲೂಕು ಹಾಗೂ ಜಿಲ್ಲೆಗಳ ಜನರಿಗೆ ಕುಡಿಯಲು ನೀರು ಮತ್ತು ರೈತರ ಜಮೀನುಗಳಿಗೆ ನೀರು ಅವಶ್ಯವಾಗಿರುವುದರಿಂದ ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಅವಶ್ಯವಾಗಿದೆ. ಜನರ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆದ್ದರಿಂದ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದರು.
ನ್ಯಾಯವಾದಿ ವಿ.ಟಿ. ಕುಲಕರ್ಣಿ ಮಾತನಾಡಿ, ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ಯೋಜನೆ ಸಾರ್ವಜನಿಕರಿಗೆ ಅವಶ್ಯವಿದೆ. ನೀರು ಪೋಲಾಗಿ ಸಮುದ್ರಕ್ಕೆ ಹೋಗುತ್ತಿರುವ ನೀರನ್ನು ಬಳಕೆ ಮಾಡುವುದರಲ್ಲಿ ಏನು ತೊಂದರೆಯಾಗಿದೆ. ಇಂಥ ಒಳ್ಳೆಯ ಯೋಜನೆಗೆ ರಾಜಕೀಯ ಮಾಡದೆ ಕಾಮಗಾರಿ ಪ್ರಾರಂಭಿಸಬೇಕೆಂದರು.
ಪಿ.ಬಿ. ಯಾವಗಲ್, ಎಚ್.ಡಿ. ಗದಗ, ಎಸ್.ಎಸ್. ಅಸೂಟಿ, ಸಿ.ಸಿ. ಅಕ್ಕಿ ಎಂ.ಎಸ್. ಹೆಬ್ಬಳ್ಳಿ, ಪಿ.ಎಚ್. ಕೋನರಡ್ಡಿ, ಎಚ್.ಎಂ. ನದಾಫ್, ಎಚ್.ಬಿ. ಸವದಿ, ಎಸ್.ಎನ್. ಡಂಬಳ, ಎಸ್.ಎಂ. ಚಿಕ್ಕನರಗುಂದ, ಎಸ್.ಎಂ. ಹಿರೇಮಠ, ಎಸ್.ವಿ. ಮರಡ್ಡಿ, ಎಂ.ಎಸ್. ಗಂಗಾಧರಮಠ, ಎಂ.ವಿ. ಮೇಗಲಮನಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

