ಧಾರವಾಡ

ಕಳಪೆ ಬೀಜ ವಿತರಣೆ: ಪ್ರತಿಭಟನೆ

Published On :

ಧಾರವಾಡ: ರೈತರಿಗೆ ಕನಕ ಬಿಟಿ ಹತ್ತಿ 7531 ಕಳಪೆ ಬೀಜ ನೀಡಿ ರೈತರನ್ನು ವಂಚನೆ ಮಾಡಿದ್ದಾರೆಂದು ಆರೋಪಿಸಿ ಕಲಘಟಗಿ ತಾಲೂಕಿನ ಗಂಭ್ಯಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಲಘಟಗಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಬಳಿ ಖರೀದಿಸಿದ ಕನಕ ಬಿಟಿ ಹತ್ತಿ ಬೀಜ ಕಳಪೆಯಾಗಿದೆ. ಈ ಬೀಜ ಖರೀದಿಸಿ ಬಿತ್ತನೆ ಮಾಡಿದ ನಂತರ ಬೆಳೆ ಉತ್ತಮವಾಗಿ ಬಂದಿದೆ. ಆದರೆ, ಬೆಳೆಯಲ್ಲಿ ಹೂ ಮತ್ತು ಕಾಯಿ ಬೆಳೆದಿಲ್ಲ. ಆದ್ದರಿಂದ ಸರ್ಕಾರ ಈ ಕುರಿತಂತೆ ಬೀಜ ವಿತರಕರನ್ನು ವಿಚಾರಣೆ ನಡೆಸಿ ಬೀಜ ಬಿತ್ತನೆ ಮಾಡಿ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಪ್ರತಿಭಟನಾಕರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಂಕರ ರಾಯನಾಳ, ಬಸಪ್ಪ ತಡಸದ, ನಾಗಪ್ಪ ಬಾಬಜೀ, ಮಹಾದೇವಪ್ಪ ನರೇಂದ್ರ, ಸಂಗಯ್ಯಾ ಚಿಕ್ಕಮಠ, ಸಿದ್ಧಪ್ಪ ಕ್ಯಾರಣ್ಣವರ, ಫಕ್ಕೀರಪ್ಪ ತಡಸದ, ಸಂಗಪ್ಪ ಮಾಳಗಿ, ದಾನಯ್ಯ ಚಿಕ್ಕಮಠ, ಪಾರೀಶ ದುಮ್ಮನವರ, ಬಸಪ್ಪ ಮಾಶೆಟ್ಟಿ, ಬಸಪ್ಪ ಪರಣ್ಣವರ, ಭೀಮಪ್ಪ ಅಮರಗೋಳ, ಅಡಿವೆಪ್ಪ ಹುಬ್ಬಳ್ಳಿ ಸೇರಿದಂತೆ ಮತ್ತಿತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.