ನವೆಂಬರ್ 1ರಿಂದ 6ನೇ ಆರ್ಥಿಕ ಗಣತಿ
ಧಾರವಾಡ: ನವೆಂಬರ್ 1ರಿಂದ 30ರ ವರೆಗೆ ಜರುಗುವ 6ನೇ ಆರ್ಥಿಕ ಗಣತಿಯ ಪೂರ್ವಸಿದ್ಧತಾ ಸಭೆ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಆರ್ಥಿಕ ಗಣತಿಗೆ ಸಂಬಂಧಿಸಿದಂತೆ ಚಾರ್ಜ್ ಅಧಿಕಾರಿಗಳನ್ನು ಈಗಾಗಲೇ ನಿಯಮಿಸಲಾಗಿದೆ. 1170 ಗಣತಿದಾರರನ್ನು ಹಾಗೂ 590 ಮೇಲ್ವಿಚಾರಕರನ್ನು ನೇಮಿಸಬೇಕಿದ್ದು, ಚಾರ್ಜ್ ಅಧಿಕಾರಿಗಳು ತಕ್ಷಣವೇ ಸಂಬಂಧಿತರಿಗೆ ನೇಮಕ ಆದೇಶಗಳನ್ನು ಜಾರಿಗೊಳಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ಇರುವ ಬ್ಲಾಕ್ ಹಂತದ ಅಧಿಕಾರಿಯನ್ನು (ಬಿಎಲ್ಒ) ಹೊರತುಪಡಿಸಿ ಹಾಗೂ ಹಿಂದಿನ ಗಣತಿಯಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಿ ನೇಮಕ ಮಾಡಬೇಕು. ಈ ಕುರಿತಂತೆ ಸಿದ್ಧವಿರುವ ಪಟ್ಟಿಯನ್ನು ಆಯಾ ತಾಲೂಕಿನ ತಹಸೀಲ್ದಾರ್ರೊಂದಿಗೆ ಹಾಗೂ ಪಾಲಿಕೆ ಆಯುಕ್ತರೊಂದಿಗೆ ಸಮಾಲೋಚಿಸಿ ನೇಮಕ ಮಾಡಲು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮೇಲ್ವಿಚಾರಕರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಅ. 17ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ಇದ್ದು, ತಪ್ಪದೇ ಹಾಜರಾಗಲು ಹಾಗೂ ಗಣತಿದಾರರಿಗೆ ಗಣತಿ ಪ್ರದೇಶ ಸೂಚಿಸುವಾಗ ಅವರು ಆ ಪ್ರದೇಶದಲ್ಲಿ ವಾಸಿಸುವ ಹಾಗೂ ಅದರ ಸುತ್ತಲಿನ ಪ್ರದೇಶವನ್ನೇ ನೀಡಲು ಅಪರ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಮಾತನಾಡಿದರು. ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಸೈಯದ್ ಪರ್ವೀನ್, ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ಹಾಗೂ ಪಾಲಿಕೆ ಅಧಿಕಾರಿಗಳು ಅಂಕಿ ಸಂಖ್ಯೆ ಇಲಾಖೆಯ ಸಹಾಯಕ ಸಂಖ್ಯಾಧಿಕಾರಿ ಬಿ.ಐ. ಹುಲಕುಂದ, ಸಹಾಯಕ ನಿರ್ದೇಶಕ ಎಂ.ಆರ್. ಜಮಾದಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

