ಧಾರವಾಡ

ನಾವೆಲ್ಲ ಪಾತ್ರಧಾರಿಗಳು

Published On :

ಧಾರವಾಡ: ಬದುಕೊಂದು ರಂಗಭೂಮಿ, ನಾವೆಲ್ಲ ಒಂದು ರೀತಿಯಲ್ಲಿ ನಟರೇ. ನಮ್ಮ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿದಾಗಲೇ ಅದು ಯಶಸ್ವಿಯಾಗುತ್ತದೆ. ಅದೇ ರೀತಿ, ರಂಗಭೂಮಿಯಲ್ಲೂ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸಿದಾಗಲೇ ಅದು ಯಶಸ್ವಿಯಾಗುತ್ತದೆ. ಇಂದು, ಬೇರೆ ಬೇರೆ ತಂತ್ರಗಳಿಂದಾಗಿ ನಟನೆ ಕಡಿಮೆಯಾಗುತ್ತಿದೆ. ಈ ಕುರಿತು ರಂಗಕರ್ಮಿಗಳು ಚಿಂತನೆ ನಡೆಸಬೇಕೆಂದು ಪ್ರಕಾಶಕ ರಮಾಕಾಂತ ಜೋಶಿ ಹೇಳಿದರು.
ಗುರುವಾರ ಇಲ್ಲಿನ ರಂಗಾಯಣ ಆವರಣದಲ್ಲಿ ನಡೆದ ನವರಾತ್ರಿ ಯುವರಂಗೋತ್ಸವದಲ್ಲಿ ಮಾತನಾಡಿ, ಯುವಕರಲ್ಲಿ ರಂಗಭೂಮಿ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲಿ ಇಂತಹ ಉತ್ಸವಗಳು ಸಹಕಾರಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಬಿ.ಐ. ಈಳಗೇರ, ರಂಗ ಕಲಾವಿದ ರವಿ ಕುಲಕರ್ಣಿ ಮಾತನಾಡಿದರು. ಆಡಳಿತಾಧಿಕಾರಿ ಕೆ.ಎಚ್. ಚನ್ನೂರ ಸ್ವಾಗತಿಸಿದರು. ಕೆ. ಜಗುಚಂದ್ರ ವಂದಿಸಿದರು. ಸನ್ಮತಿ ಅಂಗಡಿ ನಿರೂಪಿಸಿದರು. ಸುರೇಶ ಬೇಟಗೇರಿ ಇದ್ದರು.
ನಂತರ ಬಿ.ಆರ್. ಲಕ್ಷ್ಮಣ್‌ರಾವ್ ರಚಿಸಿದ ನನಗ್ಯಾಕೋ ಡೌಟು ನಾಟಕವನ್ನು, ರಾಜ್ ಕವಡೆನವರ ನಿರ್ದೇಶನದಲ್ಲಿ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಇಂದು ಬಿರುಗಾಳಿ ನಾಟಕ
ನವರಾತ್ರಿ ಯುವರಂಗೋತ್ಸವದ ಅಂಗವಾಗಿ ಅ. 11ರಂದು ಸಂಜೆ 6.30ಕ್ಕೆ ರಂಗಾಯಣದ ಬಯಲು ರಂಗಮಂದಿರದಲ್ಲಿ ಧಾರವಾಡದ ಸೃಷ್ಟಿ ವಿಜ್ಞಾನ ಪಿಯು ಕಾಲೇಜು ವಿದ್ಯಾರ್ಥಿಗಳು ಕುವೆಂಪು ರಚಿಸಿದ, ರಾಜೇಶ್ವರಿ ಸುಳ್ಯ ನಿರ್ದೇಶನದ ಬಿರುಗಾಳಿ ನಾಟಕ ಪ್ರದರ್ಶಿಸುತ್ತಾರೆ. ಡಾ. ದ.ರಾ. ಬೇಂದ್ರೆ ಟ್ರಸ್ಟ್ ನ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಉದ್ಘಾಟಿಸುವರು. ರಂಗ ನಿರ್ದೇಶಕ ವಿಠ್ಠಲ ಕೊಪ್ಪದ ಅಧ್ಯಕ್ಷತೆ ವಹಿಸುವರು. ರಂಗ ಸಂಘಟಕ ಎಸ್.ಎನ್. ದೇಶಪಾಂಡೆ, ಹುಬ್ಬಳ್ಳಿ ರಂಗ ಕಲಾವಿದೆ ಸುಮತಿಶ್ರೀ ನವಲೆ ಹಿರೇಮಠ ಅತಿಥಿಗಳಾಗಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.