ಧಾರವಾಡ

15ರಂದು ಆರ್‌ಎಸ್ಸೆಸ್ ಪಥಸಂಚಲನ

Published On :

ಹುಬ್ಬಳ್ಳಿ: ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳ ಪಥಸಂಚಲನ ಅ. 15ರಂದು ಸಂಜೆ 4ಕ್ಕೆ ನೆಹರು ಮೈದಾನದಿಂದ ಎರಡು ತಂಡಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಮೊದಲನೇ ತಂಡವು ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ್ ಪೇಟ್, ಪೆಂಡಾರಗಲ್ಲಿ, ಶಂಕರಮಠ, ಕಂಚಗಾರ ಗಲ್ಲಿ, ಭೂಸಪೇಟ್, ಮಚಗಾರ ಓಣಿ, ಪಿಂಜಾರಗಲ್ಲಿ, ಶಿಂಪಿಗಲ್ಲಿ, ಸರಾಫಗಟ್ಟಿ ವೃತ್ತ, ಜವಳಿಸಾಲ, ಬೆಳಗಾಂವ ಗಲ್ಲಿ ಮುಖಾಂತರ ದುರ್ಗದಬೈಲ್‌ಗೆ ಆಗಮಿಸಲಿದೆ. ಎರಡನೇ ತಂಡವು ಜಯಚಾಮರಾಜ ನಗರ, ಕೊಯಿನ್ ರಸ್ತೆ, ಸ್ಟೇಷನ್ ರಸ್ತೆ, ಬಂಡಿವಾಡ ಅಗಸಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟ್, ಘಂಟಿಕೇರಿ ಓಣಿ, ಅಗಸರ ಓಣಿ, ವೀರಾಪುರ ಓಣಿ, ಪಗಡಿ ಗಲ್ಲಿ ಸರ್ಕಲ್, ರಾಧಾಕೃಷ್ಣ ಗಲ್ಲಿ ಮುಖಾಂತರ ದುರ್ಗದ ಬೈಲ್‌ಗೆ ಆಗಮಿಸಲಿದೆ.
ದುರ್ಗದ ಬೈಲ್‌ನಲ್ಲಿ ಸೇರುವ ಎರಡು ಪಥ ಸಂಚಲನ ತಂಡಗಳು ನಂತರ ಕೊಪ್ಪಿಕರ್ ರಸ್ತೆ, ಕೃಷ್ಣ ಭವನ ಮುಖಾಂತರ ನೆಹರು ಮೈದಾನಕ್ಕೆ ಆಗಮಿಸಲಿವೆ.
ನೆಹರು ಮೈದಾನದಲ್ಲಿ ಸಂಜೆ 5:15ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಬೌದ್ಧಿಕ ಪ್ರಮುಖ ವಿ. ನಾಗರಾಜ ಉಪನ್ಯಾಸ ನೀಡಲಿದ್ದಾರೆ. ಶ್ರದ್ಧಾ ಟೂಲ್ಸ್ ಆ್ಯಂಡ್ ಡೈಸ್‌ನ ಮಾಲೀಕ ಶರಣಪ್ಪ ಹಗೇದಾಳ ಅಧ್ಯಕ್ಷತೆ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.