ಧಾರವಾಡ

ಕೆ.ಆರ್. ಸುಂದರ ಅಪರ ಆಯುಕ್ತ

Published On :

ಧಾರವಾಡ: ವಿದ್ಯಾರ್ಥಿಗಳ ಕಲಿಕಾ ಬದುಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬಹು ಪ್ರಮುಖವಾದ ಘಟ್ಟವಾಗಿದ್ದು, ಇದನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ ಎಂದು ಶಿಕ್ಷಣ ಇಲಾಖೆ ನೂತನ ಅಪರ ಆಯುಕ್ತ ಕೆ.ಆರ್. ಸುಂದರ ಹೇಳಿದರು.
ನಿಕಟಪೂರ್ವ ಅಪರ ಆಯುಕ್ತ ಎ.ಎನ್. ಪಾಟೀಲ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ ವ್ಯಾಸಂಗದೊಂದಿಗೆ ವಿದ್ಯಾರ್ಥಿಗಳು ವಿಫುಲ ಮಾಹಿತಿಗಳನ್ನು ಹೊಂದಿ ಉನ್ನತ ವ್ಯಕ್ತಿಯಾಗಿ ಹೊರಬರುವಂತೆ ಉಪಾಧ್ಯಾಯರು, ಅಧಿಕಾರಿಗಳು ಸೇರಿದಂತೆ ಇಲಾಖೆ ಶ್ರಮಿಸಬೇಕು ಎಂದರು.
ಲೇಖಕ ವೆಂಕಟೇಶ ಮಾಚಕನೂರು ಮಾತನಾಡಿ, ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿರುವ ಎ.ಎನ್. ಪಾಟೀಲ ಅವರು ಸದಾ ಸಾಹಿತ್ಯದ ವಿದ್ಯಾರ್ಥಿ. ಸ್ನೇಹಜೀವಿಯಾಗಿರುವ ಅವರು ಪಾರದರ್ಶಕತೆ ಮತ್ತು ವಸ್ತುನಿಷ್ಠ ನಿಲುವುಗಳಿಂದ ಆಡಳಿತದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ ಎಂದರು.
ಶಿಕ್ಷಣ ಇಲಾಖೆ ನಿರ್ದೇಶಕ ಜಿ.ಎಸ್. ನಾಯ್ಕ, ಸಹ ನಿರ್ದೇಶಕ ಸಿದ್ಧರಾಮ ಮನಹಳ್ಳಿ, ಸಿಸ್ಲೆಪ್-ಕರ್ನಾಟಕ ಸಂಸ್ಥೆ ನಿರ್ದೇಶಕ ಆರ್.ಟಿ. ದೇಸಾಯಿ ಮಾತನಾಡಿದರು.
ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್, ಡಯಟ್ ಪ್ರಾಚಾರ್ಯ ಎಚ್.ಎನ್. ಗೋಪಾಲಕೃಷ್ಣ, ರಘುವೀರ, ಮಂಗಳಾ ನಾಯಕ, ಕುಮಾರ ಶೆಟ್ಟಿ, ಆರ್.ಎಸ್. ಮುಳ್ಳೂರ, ಉಮೇಶ ಬೊಮ್ಮಕ್ಕನವರ, ಪ್ರಭಯ್ಯ ಚಿಕ್ಕಮಠ, ಬಿ.ಎಂ. ಬಡಿಗೇರ, ಎಂ.ಎಫ್. ಕುಂದಗೋಳ, ಆರ್.ಎಚ್. ಶಿವಳ್ಳಿ, ಕೆ.ಎಂ. ಶೇಖ, ಮಹಾದೇವಿ ಮೂಡಲಗೇರಿ, ಎನ್.ಎಂ. ಕುಲಕರ್ಣಿ, ಶಿವಶಂಕರ ಹಿರೇಮಠ, ಗುರುಮೂರ್ತಿ ಯರಗಂಬಳಿಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.