ರಂಗಭೂಮಿ ಕಟ್ಟಿದ ಸುಬ್ಬಯ್ಯ ನಾಯ್ಡು
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 14
100 ವರ್ಷಕ್ಕೂ ಹೆಚ್ಚು ವಯಸ್ಸಾದ ರಂಗಭೂಮಿಯ ಈ ಸಂದರ್ಭದಲ್ಲಿ ಆರಂಭಿಕ ಕಾಲದಲ್ಲಿ ಹಲವರು ತಮ್ಮ ವೈಯಕ್ತಿಕ ಜೀವನ ಮರೆತು ರಂಗಭೂಮಿ ಕಟ್ಟಿದ್ದಾರೆ. ಈ ಸಾಲಿನಲ್ಲಿ ಮೊದಲಿಗರು ಸುಬ್ಬಯ್ಯ ನಾಯ್ಡು ಎಂದು ಹಿರಿಯ ಚಿಂತಕ ಸುರೇಶ ಕುಲಕರ್ಣಿ ಹೇಳಿದರು.
ವಿದ್ಯಾವರ್ಧಕ ಸಂಘದಲ್ಲಿ ನಡೆದ ಸುಬ್ಬಯ್ಯ ನಾಯ್ಡು ನಾಟಕೋತ್ಸವದಲ್ಲಿ ಮಾತನಾಡಿದ ಅವರು, ಅನೇಕರು ಏನೆಲ್ಲ ಕಷ್ಟ-ಕೋಟಲೆಗಳನ್ನು ಅನುಭವಿಸಿ ರಂಗಭೂಮಿಯನ್ನು ಸಮರ್ಥವಾಗಿ ಕಟ್ಟಿದ್ದಾರೆ. ತಮ್ಮ ಸ್ವ-ಸಾಮರ್ಥ್ಯದಿಂದ ಕೆಲಕಾಲ ರಂಗಭೂಮಿಯನ್ನು ಆಳಿದರು. ಅವರಲ್ಲಿ ಸುಬ್ಬಯ್ಯ ನಾಯ್ಡು ಪ್ರಮುಖರು. ಆಗಿನ ಕಾಲದಲ್ಲಿಯ ರಂಗಭೂಮಿ ಇನ್ನೊಂದು ಭಾಗವಾಗಿ ಹೊರಹೊಮ್ಮಿದ ಸಿನೆಮಾ ರಂಗದಲ್ಲಿಯೂ ಅಚ್ಚರಿಯೆನಿಸುವಂತಹ ಹಲವಾರು ಇತಿಹಾಸಗಳನ್ನು ಇವರು ಸೃಷ್ಟಿಸಿದರು.
ಭಾರತೀಯ ಚಿತ್ರರಂಗಕ್ಕೆ 100 ವರ್ಷ ತುಂಬಿದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವ ಸದುದ್ದೇಶದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರಸ್ತುತ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಚಿಂತಕ ಡಾ. ಬಾಳಣ್ಣ ಸಿಗೀಹಳ್ಳಿ, ಆರಂಭಿಕ ಕಾಲದ ಹಿರಿಯರು ನಿಷ್ಠೆಯಿಂದ ಕಟ್ಟಿ, ಬೆಳೆಸಿದ ರಂಗಭೂಮಿಯೆಂಬ ಸಮುದ್ರದಲ್ಲಿ ಹಲವಾರು ಮುತ್ತು-ರತ್ನಗಳು ಕಾಲಗರ್ಭದಲ್ಲಿ ಅಡಗಿವೆ. ಅಂತಹ ಮುತ್ತು-ರತ್ನಗಳನ್ನು ರಂಗ ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಅಂತಹ ರಂಗದಿಗ್ಗಜರ ನೆನಪಿನಲ್ಲಿ ಇಂತಹ ನಾಟಕೋತ್ಸವಗಳು ನಡೆದರೆ ಸಮಕಾಲೀನ ರಂಗಾಸಕ್ತರಿಗೆ, ರಂಗಾಭಿಮಾನಿಗಳಿಗೆ ನೆನಪಿಸಿಕೊಡುವುದು ಸಮಂಜಸ ಮತ್ತು ಅರ್ಥಪೂರ್ಣ ಎಂದರು.
ಸಣ್ಣಾಟ ಕಲಾವಿದೆ ಮತ್ತು ಗಾಯಕಿ ಲಕ್ಷ್ಮೀಬಾಯಿ ನೀಲಪ್ಪನವರ ಮತ್ತು ರಂಗನಟಿ ಆರತಿ ದೇವಶಿಖಾಮಣಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.
ಧಾರವಾಡದ ರಂಗಪರಿಸರ ಕಲಾವಿದರಿಂದ ಚಂದ್ರಶೇಖರ ಜಿಗಜಿನ್ನಿ ನಿರ್ದೇಶನದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಶ್ರೀ ಕೃಷ್ಣ ಗಾರುಡಿ ನಾಟಕ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

