ಇಂದು ಹ್ಯಾಂಡ್ಬಾಲ್ ಸ್ಪರ್ಧೆ
ಧಾರವಾಡ: ಇಲ್ಲಿನ ಮಲ್ಲಸಜ್ಜನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಅ. 25 ಹಾಗೂ 26ರಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಎರಡು ದಿನಗಳ ಹ್ಯಾಂಡ್ಬಾಲ್ ಸ್ಪರ್ಧೆಗಳು ನಡೆಯಲಿವೆ. ವಿಭಾಗ ಮಟ್ಟಗಳಲ್ಲಿ ವಿಜೇತ ತಲಾ ನಾಲ್ಕು ತಂಡಗಳಂತೆ ಒಟ್ಟು 198 ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅ. 25ರಂದು ಬೆಳಗ್ಗೆ 9.30ಕ್ಕೆ ಉದ್ಘಾಟಿಸುವರು. ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.
ನಾಳೆ ಉದ್ಯೋಗ ಮೇಳ
ಹುಬ್ಬಳ್ಳಿ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ತರಬೇತಿ ನಿಗಮದ ಆಶ್ರಯದಲ್ಲಿ ಅ.26ರಂದು ಬೆಳಗ್ಗೆ 9:30ಕ್ಕೆ ಹುಬ್ಬಳ್ಳಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಫ್-ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಕೋಲಾರನ ಐಟಿಸಿ (ಫುಡ್ ಡಿವಿಜನ್) ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಕ್ಕೆ ಅಭ್ಯರ್ಥಿಗಳ ಸಂದರ್ಶನ ಮಾಡಿಕೊಳ್ಳಲಿದೆ. ಐಟಿಐನಲ್ಲಿ ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಂಎಂವಿ, ಡೀಸೆಲ್ ಮೆಕ್ಯಾನಿಕ್, ಎಲೆಕ್ಟ್ರೀಶಿಯನ್ ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ನಲ್ಲಿ ಉತ್ತೀರ್ಣರಾಗಿರಬೇಕು. 18-27 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು ಸಂದರ್ಶನಕ್ಕೆ ಬರುವ ಸಂದರ್ಭದಲ್ಲಿ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರ, ಪಾಸ್ಪೋರ್ಟ್ ಅಳತೆ ಭಾವಚಿತ್ರ ಹಾಗೂ ಸ್ವವಿವರದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಿರಬೇಕು. ಮಾಹಿತಿಗೆ ದೂ: 0836-2225289ನ್ನು ಸಂಪರ್ಕಿಸಬಹುದು.
27ರಂದು ಹೋಟೆಲ್ ಡೆನ್ನಿಸನ್ಸ್ ಉದ್ಘಾಟನೆ
ಹುಬ್ಬಳ್ಳಿ: ಡಿಆರ್ಎನ್ ಸಮೂಹದ ಡೆನ್ನಿಸನ್ಸ್ ಫೈವ್ಸ್ಟಾರ್ ಮಾದರಿ ಹೊಟೇಲ್ ಉದ್ಘಾಟನೆ ಅ. 27ರಂದು ನಡೆಯಲಿದೆ ಎಂದು ಡಿಆರ್ಎನ್ ಸಮೂಹ ಕಂಪನಿ ನಿರ್ದೇಶಕಿ ದೀಪಾ ನಾಯಕ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕುಲ್ ರಸ್ತೆಯಲ್ಲಿ 10 ವಿಶಾಲ ಜಾಗದಲ್ಲಿ 1.18 ಲಕ್ಷ ಚದರ ಅಡಿಯಲ್ಲಿ ಭವ್ಯ ಹೋಟೆಲ್ ನಿರ್ಮಿಸಿದ್ದು, ಹೋಟೆಲ್ನಲ್ಲಿ ಒಟ್ಟು 86 ರೂಂಗಳಿದ್ದು, 60 ಪ್ರೀಮಿಯಂ, 18 ಕ್ಲಬ್ ಮತ್ತು 6 ಸೂಟ್ ಇವೆ. ಹವಾನಿಯಂತ್ರಿತ ಸಭಾಂಗಣವಿದ್ದು ಒಟ್ಟು 800 ಜನರು ಕುಳಿತುಕೊಳ್ಳುವುದಕ್ಕೆ ಅವಕಾಶವಿದೆ. ಹುಬ್ಬಳ್ಳಿಯಲ್ಲಿಯೇ ಇದು ಅತ್ಯಂತ ದೊಡ್ಡ ಸಭಾಂಗಣವಾಗಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಿಕ ಸಭೆಗಳಿಗೆ ಮತ್ತು ವಿಚಾರ ಸಂಕಿರಣಗಳಿಗೆ ಸೂಕ್ತವಾಗಿದೆ. ಡೆನ್ನಿಸನ್ಸ್ ಹೋಟೆಲ್ ಮಹಾಪ್ರಬಂಧಕ ಶಾಂತಶೀಲ ಅವರು, ಫೈವ್ ಸ್ಟಾರ್ ಹೊಟೇಲ್ ಅಲ್ಲದಿದ್ದರೂ ಫೈವ್ ಸ್ಟಾರ್ ಹೊಟೇಲ್ನಲ್ಲಿ ದೊರೆಯುವ ಎಲ್ಲ ಸೌಲಭ್ಯ ಗ್ರಾಹಕರಿಗೆ ನೀಡಲಾಗುವುದು. ಇಡೀ ಹೊಟೇಲ್ ಕಟ್ಟಡ ನಿರ್ಮಾಣಕ್ಕೆ ಅಂದಾಜು ರು. 30 ಕೋಟಿ ವೆಚ್ಚ ಮಾಡಲಾಗಿದ್ದು, ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಗೋವಾ ಮತ್ತು ಮಹಾರಾಷ್ಟ್ರದಲ್ಲಿರುವ ಪ್ರವಾಸಿ ಏಜೆಂಟ್ರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಉದ್ದೇಶ ಡೆನ್ನಿಸನ್ಸ್ಗೆ ಇದೆ ಎಂದರು. ಡಿಆರ್ಎನ್ ಇನ್ಫ್ರಾಸ್ಟ್ರಕ್ಚರ್ ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ನೀರಾವರಿ, ಮತ್ತು ಆಧುನಿಕ ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಹೆಸರು ಮಾಡಿದೆ. 3 ವರ್ಷಗಳ ಹಿಂದೆ ಹೋಟೆಲ್ ಉದ್ಯಮಕ್ಕೆ ಕಾಲಿರಿಸುವ ನಿಟ್ಟಿನಲ್ಲಿ ಡಿಆರ್ಎನ್ ಸಮೂಹ ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಫೈವ್ಸ್ಟಾರ್ ಮಾದರಿಯ ಡೆನ್ನಿಸನ್ಸ್ ಹೋಟೆಲ್ ಆರಂಭಿಸಿದೆ ಎಂದರು. ಡಿಆರ್ಎನ್ ಸಮೂಹದ ಉಪಾಧ್ಯಕ್ಷ ಚೇತನ್ ಕಾಮತ್, ಡಿಆರ್ಎನ್ ಕಾಂಟ್ರಾಕ್ಟ್ ವಿಭಾಗದ ಮಹಾಪ್ರಬಂಧಕ ರಾಘವೇಂದ್ರ ಪೈ, ಸಲಹೆಗಾರ ವಿ. ರಮೇಶ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

