ಕುಂದಗೋಳ: ತಾಡಪತ್ರಿ ಕಳವು
ಕುಂದಗೋಳ: ಶೇಂಗಾ ಬಳ್ಳಿಯನ್ನು ಕಿತ್ತು ಬಣವೆ ಹಾಕಿ, ಯಂತ್ರದ ಮೂಲಕ ಬಳ್ಳಿಯಿಂದ ಶೇಂಗಾ ಬೇರ್ಪಡಿಸಲು ಸಕಾಲಕ್ಕೆ ಯಂತ್ರ, ಆಳು ಸಿಗದೆ ಮಳೆಯಿಂದ ಬಣವೆ ರಕ್ಷಿಸಲು ರೈತರು ತಾಡಪತ್ರಿಗಳನ್ನು ಹೊದೆಸುತ್ತಿದ್ದಾರೆ. ಆದರೆ, ಹೊದಿಸಿದ ತಾಡಪತ್ರಿಗಳು ಕಳುವಾಗುತ್ತಿರುವುದು ರೈತರಲ್ಲಿ ಭೀತಿ ಮೂಡಿಸಿದೆ. ಹೊಲದಿಂದ ಶೇಂಗಾಬಳ್ಳಿ ಕಿತ್ತು ಕುಂದಗೋಳ ಪಟ್ಟಣದ ಹೊರವಲಯದಲ್ಲಿ ಕಣಗಳನ್ನು ಮಾಡಿಕೊಂಡು ಅಲ್ಲಿ ಶೇಂಗಾಬಳ್ಳಿ ಬಣವೆ ಹಾಕಿ ಸಂಜೆವರೆಗೆ ಮಾತ್ರ ಅಲ್ಲಿದ್ದು, ರಾತ್ರಿ ರೈತರು ತಮ್ಮ ಮನೆಗೆ ಬಂದಮೇಲೆ ರಾತ್ರಿ ವೇಳೆ ತಾಡಪತ್ರಿಗಳನ್ನು ಕಳುವು ಮಾಡುತ್ತಿದ್ದಾರೆಂದು ಪಟ್ಟಣದ ಪ್ರಗತಿಪರ ರೈತ, ಪಪಂ ಮಾಜಿ ಅಧ್ಯಕ್ಷ ಈಶ್ವರಪ್ಪ ಗಂಗಾಯಿ ತಿಳಿಸಿದರು.
ಬಣವೆಗೆ ಮುಚ್ಚಿದ ರು. 5 ಸಾವಿರ ಬೆಲೆಯ ತಾಡಪತ್ರಿ ಕಳವಾಗುವುದು ಒಂದೆಡೆಯಾದರೆ, ತಾಡಪತ್ರಿ ಕಳುವಾದ ದಿನ ಮಳೆಯಾದರೆ ಲಕ್ಷಾಂತರ ಮೌಲ್ಯದ ಶೇಂಗಾಕಾಯಿ ನಾಶವಾಗುವ ಆತಂಕ ನಿರ್ಮಾಣವಾಗಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ತಾಡಪತ್ರಿಗಾಗಿ ರಾತ್ರಿ ಇಡೀ ಕಾಯುವ ಪರಿಸ್ಥಿತಿಯುಂಟಾಗಿದೆ. ಈ ತಾಡಪತ್ರಿ ಸರಣಿ ಕಳುವು ಪಟ್ಟಣದ ಸುತ್ತಲಿನ ಕಡಪಟ್ಟಿ ರಸ್ತೆ, ಬಿಡನಾಳ ಬೈಪಾಸ್ ರಸ್ತೆ, ಬೆಟದೂರ ರಸ್ತೆ ಹಾಗೂ ಶಿರೂರ ರಸ್ತೆಗೆ ಹೊಂದಿಕೊಂಡಿರುವ ಹೊಲಗಳಲ್ಲಿ ನಡೆಯುತ್ತಿದೆ ಎಂದು ಪಿ.ಟಿ. ಕಿರೇಸೂರ, ಬಿ.ಟಿ. ಗಂಗಾಯಿ, ಸುರೇಶ ಗುಮ್ಮಗೋಳ, ಬಸುರಾಜ ಬಿಡನಾಳ, ಟಾಕಣ್ಣ ಭಂಡಿವಾಡ, ಸುರೇಶ ಗಂಗಾಯಿ, ಮಲ್ಲಿಕಾರ್ಜುನ ಪಾಟೀಲ, ಮಲ್ಲಪ್ಪ ಮಾರಡಗಿ ಇನ್ನೂ ಅನೇಕರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

