ಚಿತ್ರಕಲೆ: ಅರ್ಜಿ ಆಹ್ವಾನ
ಧಾರವಾಡ: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಿ. 7, 8ರಂದು ಆಳ್ವಾಸ್ ವಿಶ್ವ ವರ್ಣಸಿರಿ 2013 ಬೃಹತ್ ಚಿತ್ರಕಲಾ ಶಿಬಿರ ಹಮ್ಮಿಕೊಂಡಿದೆ. ಶಿಬಿರದಲ್ಲಿ ಕೇವಲ ಕಾರ್ಯನಿರತ, ಕ್ರಿಯಾಶೀಲ ಕಲಾವಿದರು ಮಾತ್ರ ಭಾಗವಹಿಸಬಹುದು. ಆಸಕ್ತ ಕಲಾವಿದರು ತಮ್ಮ ಪರಿಚಯ ಹಾಗೂ ಕೃತಿಗಳ ಇತ್ತೀಚಿನ ಛಾಯಾಚಿತ್ರಗಳೊಂದಿಗೆ ಅ. 31ರೊಳಗೆ ಅರ್ಜಿ ಸಲ್ಲಿಸಬಹುದು. ಕಲಾವಿದರ ಹೆಸರು ನೋಂದಣಿಗಾಗಿ ಆಯಾ ಜಿಲ್ಲಾ ಸಂಚಾಲಕರನ್ನು ಸಂಪರ್ಕಿಸಬಹುದಾಗಿದ್ದು, ಅಂತಿಮವಾಗಿ ಆಯ್ಕೆ ಸಮಿತಿಯು ಆರಿಸಿದ ಕಲಾವಿದರಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶವಿದೆ. ಅದರಂತೆ ಆಸಕ್ತ ಧಾರವಾಡ ಜಿಲ್ಲೆಯ ಕಲಾವಿದರು ಸಂಚಾಲಕ ಹಾಗೂ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಉಪನ್ಯಾಸಕ ಪ್ರತಾಪ ಬಹುರೂಪಿ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಇಂದು-ನಾಳೆ ಐಎನ್ಕೆ ಸ್ಟ್ರೀಂ ಉತ್ಸವ
ಧಾರವಾಡ: ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಅಕ್ಟೋಬರ್ 26 ಹಾಗೂ 27ರಂದು ನಿತ್ಯ ಬೆಳಗ್ಗೆ 9 ಗಂಟೆಯಿಂದ ಐಎನ್ಕೆ ಸ್ಟ್ರೀಂ ಉತ್ಸವ ನಡೆಯಲಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾದ ಈ ಉತ್ಸವಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಈ ಕಾರ್ಯಕ್ರಮದಲ್ಲಿ ವಿಡಿಯೋ ಗೇಮ್ಸ್ನ ಸುನಿಲ್ ಥಂಕಾಮುಶಿ, ಗೂಗಲ್ನ ಹಿರಿಯ ಅಧಿಕಾರಿ ನಿಕೇಶ್ ಅರೋರಾ, ನೆಕ್ಸ್ಟ್ ಡ್ರಾಪ್ ಸಂಸ್ಥೆ ಸಂಸ್ಥಾಪಕ ಸಿಇಓ ಅನು ಶ್ರೀಧರನ್, ಲೇಖಕ ವರುಣ್ ಅಗರವಾಲ, ಕ್ಲಾರಿನೆಟ್ ವಾದಕ ಶಂಕರ ಟಕ್ಕರ್ ಮತ್ತಿತರರು ಭಾಗವಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ 0836-2748778 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ದೀಪಾವಳಿ ವಿಶೇಷ ಬಜಾರ್
ಧಾರವಾಡ: ಐಡಿಎಫ್ದಿಂದ ವನವಾಸಿ ರಾಮಮಂದಿರದಲ್ಲಿ ದೀಪಾವಳಿ ವಿಶೇಷ ಬಜಾರನ್ನು ಅ. 26ರ ಸಂಜೆ 6ಕ್ಕೆ ಜಿಪಂ ಸಿಇಒ ಪಿ.ಎ. ಮೇಘಣ್ಣವರ ಉದ್ಘಾಟಿಸುವರು. ಅತಿಥಿಯಾಗಿ ವೈ.ಎನ್. ಮಹದೇವಯ್ಯ ಆಗಮಿಸುವರು. ಎನ್.ಎಂ. ಪಾಟೀಲ ಅಧ್ಯಕ್ಷತೆ ವಹಿಸುವರು.
ಬಿಜೆಪಿ: ಹಾವೇರಪೇಟ ನೇಮಕ
ಧಾರವಾಡ: ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಘಟಕಉಪಾಧ್ಯಕ್ಷರಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಕಲ್ಮೇಶ ಹಾವೇರಪೇಟ ನೇಮಕವಾಗಿದ್ದಾರೆ. ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಸಿರಗುಪ್ಪ ಕ್ಷೇತ್ರ ಮಾಜಿ ಶಾಸಕ ಸೋಮಲಿಂಗಪ್ಪ ಅವರು ಡಾ. ಕಲ್ಮೇಶ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಪ್ರಭಾರಿ ಜವಾಬ್ದಾರಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

