ಧಾರವಾಡ

ಗಮನ ಸೆಳೆದ ರಂಗ ಶೋಭಾಯಾತ್ರೆ

Published On :

ಬಳ್ಳಾರಿ: ರಂಗ ತೋರಣದ 9ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವದ ಅಂಗವಾಗಿ 2ನೇ ದಿನವಾದ ಶನಿವಾರ ಸಂಜೆ ವಿವಿಧ ಕಾಲೇಜುಗಳ ತಂಡಗಳು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದ ರಂಗ ಶೋಭಾಯಾತ್ರೆ ಎಲ್ಲರ ಗಮನ ಸೆಳೆಯುವಂತಿತ್ತು. ಆನೆಯ ಗಂಭೀರ ನಡಿಗೆ ಎಲ್ಲರೂ ನಿಂತು ನೋಡುವಂತೆ ಮಾಡಿತು. ಬಳ್ಳಾರಿ ದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಗೆ ಹಿರಿಯ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀ.ವಿ. ಸಂಘದ ಆಡಳಿತ ಮಂಡಳಿ ಸದಸ್ಯ ಕಣ್ಣಿ ರಾಜಶೇಖರ್, ನ್ಯಾ. ಡಿ. ಮಹೇಂದ್ರನಾಥ್, ಉಮೇಶ್ ಶೆಟ್ಟಿ ಇದ್ದರು. ಶೋಭಾಯಾತ್ರೆಯಲ್ಲಿ ನಗರದ ಹಗಲು ವೇಷಧಾರಿಗಳು, ಗಾಂಧೀಜಿ, ಅಂಬೇಡ್ಕರ್ ಅವರ ವೇಷಗಳನ್ನು ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ರಿಕ್ಷಾದಲ್ಲಿ ಲ್ಯಾಪ್ಟ್ಯಾಪ್ಗಳನ್ನು ಇಟ್ಟುಕೊಂಡು ಹೋಗುತ್ತಿರುವ ದೃಶ್ಯ, ಡೊಳ್ಳು ಕುಣಿತ, ಗೊರವಯ್ಯ ವೇಷಧಾರಿಗಳ ಮಧ್ಯೆ ರಂಗತೋರಣದ ಸರ್ವಾಧ್ಯಕ್ಷ ಮಂಡ್ಯ ರಮೇಶ್ ಅವರು ರಂಗ ಶೋಭಯಾತ್ರೆ ಮೆರವಣಿಗೆ ಹೊರಟಿದ್ದರು. ಶೋಭಾಯಾತ್ರೆಯ ನಗರದ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ, ನಗರದ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಪೊಲೀಸ್ ಠಾಣೆ, ಮೋತಿ ವೃತ್ತದ ಮೂಲಕ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಿತು.  ವಿ. ರವಿಕುಮಾರ್,  ಯಶವಂತರಾಜ್, ಹೋಟೆಲ್ ಮಾಲೀಕರ ಸಂಘದ ಸುರೇಶ್ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.