ಇಂದು ನೇತ್ರ ತಪಾಸಣೆ ಶಿಬಿರ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಪಾಲಿಕೆಯಿಂದ ವಾರ್ಡ್ ನಂ. 61ರ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಹಳೇ-ಹುಬ್ಬಳ್ಳಿ ಸಮುದಾಯ ಭವನದಲ್ಲಿ ನಗರ ಪ್ರದೇಶದ ಬಡ ಜನರಿಗೆ ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಸೆ. 3ರಂದು ಹಮ್ಮಿಕೊಳ್ಳಲಾಗಿದೆ.
ಪಾಲಿಕೆಯು ಶೇ. 22.75ರ ಪ. ಜಾತಿ- ಪ. ಪಂಗಡ ಅನುದಾನ, ಶೇ. 7.25ರ ನಗರ ಪ್ರದೇಶದ ಜನರ ಕಲ್ಯಾಣ ಅನುದಾನ ಹಾಗೂ ಶೇ. 3ರ ವಿಕಲಚೇತನರ ಕಲ್ಯಾಣ ಅನುದಾನದಲ್ಲಿ ಪರಿಶಿಷ್ಟ ಜಾತಿ- ಪಂಗಡ ಜನರಿಗೆ, ನಗರ ಪ್ರದೇಶದ ಬಡ ಜನರಿಗೆ ಮತ್ತು ವಿಕಲಚೇತನರಿಗೆ ಕಣ್ಣಿನ ಉಚಿತ ತಪಾಸಣಾ, ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಹಾನಗರ ಪಾಲಿಕೆಯು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಇಂಡಿಯನ್ ರೆಡ್ಕ್ರಾಸ್ ಸಂಸ್ಥೆ ಹಾಗೂ ಶ್ರೀ ಗುರು ಮಹಿಪತಿರಾಜ ನೇತ್ರ ಸೇವಾ ಸಂಸ್ಥೆ (ಎಂ.ಎಂ. ಜೋಶಿ ಆಸ್ಪತ್ರೆ) ಸಂಯುಕ್ತ ಆಶ್ರಯದಲ್ಲಿ ನೇತ್ರ ಶಿಬಿರ್ನ ಏರ್ಪಡಿಸಲಾಗಿದೆ. ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ವಾರ್ಡ್ ಸದಸ್ಯ ದಶರಥ ವಾಲಿ ಮತ್ತು ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಶಿಬಿರ ಉದ್ಘಾಟಿಸುವರು. ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನುರಿತ ವೈದ್ಯರು ಭಾಗವಹಿಸುವರು. ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ಜರುಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

