ಧಾರವಾಡ

ಯುವಜನ ಜಾಗೃತಿ ವಿವೇಕ ಓಟ ಯಶಸ್ವಿ

Published On :

ಧಾರವಾಡ: ಇಲ್ಲಿನ ಕಡಪಾ ಮೈದಾನದಲ್ಲಿ ವೀರಸನ್ಯಾಸಿ ವಿವೇಕಾನಂದರ 150ನೇ ಜನ್ಮ ವರ್ಷದ ಅಂಗವಾಗಿ ಯುವ ಜನರ ಜಾಗೃತಿಗಾಗಿ ಏರ್ಪಡಿಸಿದ್ದ ವಿವೇಕ ಓಟ ಬುಧವಾರ ಯಶಸ್ವಿಯಾಗಿ ಜರುಗಿತು.
ಇದೇ ಸಂದರ್ಭ ಮಾತನಾಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ, ಜಗತ್ತಿಗೆ ಸಹಿಷ್ಣುತೆ, ಸರ್ವಧರ್ಮ, ಸಮಭಾವ, ಸಕಲ ಧರ್ಮಗಳಿಗೆ ಸತ್ಯ ಮತ್ತು ಶ್ರೇಷ್ಠ ಎಂದು ನಂಬಿದ, ವಿಶ್ವವೇ ಒಂದು ಗ್ರಾಮ. ಅವರ ಇಂತಹ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಿದಲ್ಲಿ ಉತ್ತಮ ಸಮಾಜದ ಜೊತೆಗೆ ಶಾಂತಿ ಸೌಹಾರ್ದತೆ ಬೆಳೆಯುತ್ತದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, ಉದಾರ ಹೃದಯಿ ಯುವಕ ಯುವತಿಯರು ಭೋಗ ಮತ್ತು ಸುಖ ಸೌಕರ್ಯಗಳ ಲಾಲಸೆ ತೊರೆಯಬೇಕು. ಇದರಿಂದ ದಾರಿದ್ರ್ಯ, ಅಜ್ಞಾನದಲ್ಲಿ ಮುಳುಗಿರುವ ಭಾರತೀಯರ ಏಳಿಗೆ ಸಾಧ್ಯವಾಗುತ್ತದೆ ಎಂದರು.
ಸಂಘದ ಪ್ರಮುಖ ಶ್ರೀಧರ ನಾಡಗೀರ, ಎಬಿವಿಪಿ ಶರಣು ಅಂಗಡಿ, ನ್ಯಾಯವಾದಿ ವಿ.ಡಿ. ಕಾಮರೆಡ್ಡಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ಡಾ.ಜಿ.ಬಿ. ನಂದನ್, ಹರ್ಷವಂತ ಶೀಲವಂತ, ಎನ್.ಜಿ. ಗಲಗಲಿ, ರವಿ ಯಲಿಗಾರ, ಪ್ರಶಾಂತ ಕುಲಕರ್ಣಿ, ಅನೂಪ ದೇಶಪಾಂಡೆ, ಆರ್.ಕೆ. ಕುಲಕರ್ಣಿ, ಸಂತೋಷ ಪೂಜಾರಿ, ನವೀನ ಹಿರೇಮಠ, ಜಯಂತ ಕೆ.ಎಸ್., ವಿಶಾಲ ಸಂಗಣ್ಣವರ, ಜಗದೀಶ ಬಾರಗಿ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.