ನಾಳೆ ದೇವ ಪೂಜಾ ಕಾರ್ಯಕ್ರಮ
ಹುಬ್ಬಳ್ಳಿ: ಕನ್ಯಾ ಸಂಕ್ರಮಣದ ಪ್ರಯುಕ್ತ ಸೆ. 17ರಂದು ಹುಬ್ಬಳ್ಳಿಯ ಮಹಾವೀರ ಗಲ್ಲಿಯಲ್ಲಿನ ವಿಶ್ವಕರ್ಮ ದೇವಸ್ಥಾನದಲ್ಲಿ ವಿಶ್ವಕರ್ಮ ದೇವ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ದೇವಸ್ಥಾನ ಟ್ರಸ್ಟ್ ಸಮಿತಿ ಕೋಶಾಧ್ಯಕ್ಷ ಮಹಾದೇವ ಮುಳಗುಂದ ತಿಳಿಸಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 11ಕ್ಕೆ ಶಂಕರಾಚಾರ್ಯ ಕಡ್ಲಾಸ್ಕರ್ ಅವರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ಪ್ರಮಾಣ ಪತ್ರ ಬಿಡುಗಡೆ ಮಾಡಲಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ಗಣಕೀಕೃತ ವಧು-ವರರ ಮಾಹಿತಿ ಕೇಂದ್ರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ನಾಗರಾಜ ಛಬ್ಬಿ, ಶ್ರೀನಿವಾಸ ಮಾನೆ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ರಾಮಣ್ಣ ಬಡಿಗೇರ, ಗುರುನಾಥ ಹಂಸಬಾವಿ, ನಾರಾಯಣ ಬಡಿಗೇರ, ಅಶೋಕ ಜತ್ತಿ ಮತ್ತು ಉಮೇಶ ಕಣಗಿನಾಳ ಇನ್ನಿತರರು ಇದ್ದರು.
ಪಿಎಚ್ಡಿ ಪ್ರದಾನ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ಅಭ್ಯರ್ಥಿ ಪ್ರಸಾದ ದೇಶಪಾಂಡೆ ಪ್ರಾಣಿಶಾಸ್ತ್ರ ವಿಷಯದ ಕುರಿತು ಮಂಡಿಸಿದ ಸ್ಟಡೀಸ್ ಆನ್ ಡೆವಲಪಮೆಂಟ್, ಗ್ರೋಥ್ ಆಂಡ್ ಮೆಚುರೇಶನ್ ಆಫ್ ಸೊಸೈಟ್ಸ್ ಇನ್ ಝೀಬ್ರಾಫಿಶ್ ಡ್ಯಾನಿಯೋ ರೆರಿಯೋ ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ವಿಭಾಗದ ಪ್ರಾಧ್ಯಾಪಕಿ ಡಾ ಪಂಚರತ್ನಾ ಕಟ್ಟಿ ಮಾರ್ಗದರ್ಶನ ನೀಡಿದ್ದಾರೆ.
ಪಿಎಚ್ಡಿ ಪ್ರದಾನ
ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯ 'ಅನುವಂಶಿಕತೆ ಹಾಗೂ ಸಸ್ಯ ತಳಿ ವರ್ಧನೆ' ವಿಷಯದಲ್ಲಿ ಸೋಮಶೇಖರ ಗಂಗಯ್ಯ ಗುಡ್ಡದಮಠ ಅವರು ಮಂಡಿಸಿದ ಸ್ಟಡೀಸ್ ಆನ್ ಜೆನೆಟಿಕ್ ಎನ್ಹಾನ್ಸ್ಮೆಂಟ್ ಆಫ್ ಶುಗರ್ಕೇನ್ ಪ್ರೊಡಕ್ಟಿವಿಟಿ ಫಾರ್ ಆರ್ಗ್ಯಾನಿಕ್ ಜಾಗರಿ ಪ್ರೊಡಕ್ಷನ್ ಪ್ರಬಂದಕ್ಕೆ ಡಾಕ್ಟರೇಟ್ ಪ್ರದಾನ ಮಾಡಿದೆ. ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೆಶಕ ಡಾ ಬಸವರಾಜ ಎಂ. ಖಾದಿ ಮಾರ್ಗದರ್ಶಕರಾಗಿದ್ದರು. ತಳಿ ವರ್ಧಕ ಡಾ ಸಂಜಯ ಪಾಟೀಲ ಸಹ ಮಾರ್ಗದರ್ಶಕರಾಗಿದ್ದರು.
ನೌಕರರ ಸಂಘಕ್ಕೆ ನೇಮಕ
ಧಾರವಾಡ: ಎಸ್.ಕೆ. ರಾಮದುರ್ಗ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ನಿಯಮದ ಪ್ರಕಾರ ನೇಮಕ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

