ಧಾರವಾಡ

ನೇತ್ರ, ಕಾಲು ತಪಾಸಣಾ ಶಿಬಿರ

Published On :

ಹುಬ್ಬಳ್ಳಿ: ಮಧುಮೇಹ ರೋಗಿಗಳಿಗೆ ಕಣ್ಣು ಹಾಗೂ ಕಾಲುಗಳ ಉಚಿತ ತಪಾಸಣೆ ಶಿಬಿರವನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಇಲ್ಲಿಯ ದೇಶಪಾಂಡೆ ನಗರದಲ್ಲಿರುವ ಮಂದಾಕಿನಿ ಮೆಮೊರಿಯಲ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನಗರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂದಾಕಿನಿ ಮೆಮೊರಿಯಲ್ ಆಸ್ಪತ್ರೆಯ ಡಾ. ಸುನೀಲ ಕರಿ ಹಾಗೂ ದಿವ್ಯಜ್ಯೋತಿ ನೇತ್ರ ಚಿಕಿತ್ಸಾ ಆಸ್ಪತ್ರೆಯ ಡಾ. ಸಿದ್ದೇಶ, ಎರಡೂ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರದ ಬೆಳಗ್ಗೆ 10ರಿಂದ ಈ ಉಚಿತ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಪ್ರತಿಯೊಬ್ಬ ಮಧುಮೇಹಿ ರೋಗಿ ಶೇ. 40ರಷ್ಟು ಭಾಗದ ಕಾಲು ಹಾಗೂ ಶೇ. 38ರಿಂದ 39ರಷ್ಟು ಕಣ್ಣಿನ ರೋಗದಿಂದ ಬಳಲುತ್ತಿರುತ್ತಾನೆ. ಈ ಸಮಸ್ಯೆಗಳ ಬಗ್ಗೆ ಪ್ರಾರಂಭದಲ್ಲಿ ಸಾಕಷ್ಟು ತೊಂದರೆ ಆಗುವುದಿಲ್ಲ. ಆದರೆ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ತೋರಿದಲ್ಲಿ ಮುಂದಿನ ದಿನಗಳಲ್ಲಿ ರೋಗ ಉಲ್ಬಣಗೊಂಡು ತೊಂದರೆಪಡಬೇಕಾಗುತ್ತದೆ. ಆದಕಾರಣ ಮಧುಮೇಹಿಗಳು ಪ್ರಾರಂಭದಲ್ಲಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಾ. ಸುನೀಲ ಕರಿ ತಿಳಿಸಿದರು. ಮಧುಮೇಹ ನಿಯಂತ್ರಣದಲ್ಲಿದೆಯೆಂದು ಹೆಚ್ಚಿನ ರೋಗಿಗಳು ದೇಹದ ಇತರ ಭಾಗಗಳನ್ನು ನಿರ್ಲಕ್ಷಿಸುತ್ತಾರೆ. ಮಧುಮೇಹ ನಿಯಂತ್ರಣದಲ್ಲಿದ್ದರೂ ದೇಹದ ಇತರ ಭಾಗಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು ಎಂದರು. ಪ್ರತಿಯೊಬ್ಬ ಮಧುಮೇಹಿ ಐದು ವರ್ಷಗಳಲ್ಲಿ ಕಣ್ಣಿನ ನರದ ತೊಂದರೆಯಿಂದ ಬಳಲುತ್ತಾನೆ ಎಂದು ಎಚ್ಚರಿಕೆ ನೀಡಿದ ಡಾ. ಸಿದ್ದೇಶ, ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಕಣ್ಣಿನ ನರದ ತೊಂದರೆ ತಪ್ಪಿಸಬಹುದು ಎಂದು ಸಲಹೆ ನೀಡಿದರು. ಮಧುಮೇಹ ರೋಗ ಇರುವವರು ನಿಗದಿತ ಸಮಯಕ್ಕೆ ಕಣ್ಣುಗಳನ್ನು ತಪಾಸಣೆ ಮಾಡಿಸಬೇಕು. ಇಲ್ಲದಿದ್ದಲೆ ದೃಷ್ಟಿ ದೋಷ ಎದುರಿಸುವುದು ಖಚಿತ ಎಂದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಮಧುಮೇಹ ರೋಗಿಗಳು ಹೆಚ್ಚುತ್ತಿದ್ದಾರೆ. ಮಧುಮೇಹ ರೋಗದಿಂದ ಆಗುವ ತೊಂದರೆಗಳ ಬಗ್ಗೆ ಜಿಲ್ಲೆಯ 127 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ತಿಳಿವಳಿಕೆ ನೀಡಲಾಗಿದೆ. ಗಾಯ ಮಾಯದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸುವಂತೆ ಸೂಚಿಲಾಗಿದೆ ಎಂದು ಡಾ. ಸುನೀಲ ಕರಿ ತಿಳಿಸಿದರು.
ಪ್ರಕಾಶ ಶಿಗ್ಲಿ ಅಧ್ಯಕ್ಷರಾಗಿ ಆಯ್ಕೆ
ನವಲಗುಂದ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಎರಡುವರೆ ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಪುರಸಭೆ ಸದಸ್ಯ ಪ್ರಕಾಶ ಶಿಗ್ಲಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಟಿ.ಎಫ್. ಕೋಟೆ ಕಾರ್ಯನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.