ಧಾರವಾಡ

ಕಿಮ್ಸ್ ಐವರು ವೈದ್ಯರ ಅಮಾನತು

Published On :

ಹುಬ್ಬಳ್ಳಿ: ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ ತಮ್ಮ ಖಾಸಗಿ ಆಸ್ಪತ್ರೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಕಿಮ್ಸ್‌ನ ಐವರು ವೈದ್ಯರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.  ಡಾ. ರವಿರಾಜ ರಾಯ್ಕರ್, ಡಾ. ಈಶ್ವರ ಹಸಬಿ, ಡಾ. ನಾರಾಯಣಚಂದ್ರ ಹೆಬಸೂರ, ಡಾ. ದುರ್ಗಾಪ್ರಸಾದ ಕಬಾಡೆ, ಡಾ. ಅರುಣಕುಮಾರ ಅಮಾನತುಗೊಂಡಿರುವ ವೈದ್ಯರು. ಕರ್ತವ್ಯಕ್ಕೆ ಸಕಾಲಕ್ಕೆ ಹಾಜರಾಗದೇ ತಮ್ಮ ಖಾಸಗಿ ಆಸ್ಪತ್ರೆಯಲ್ಲಿಯೇ ಇರುತ್ತಿದ್ದರು ಎಂಬುದು ತನಿಖೆಯಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಇವರನ್ನು ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ವೈದ್ಯರ ಕರ್ತವ್ಯ ಲೋಪದ ಬಗ್ಗೆ ಖಾಸಗಿ ವಾಹಿನಿ ಕುಟುಕು ಕಾರ್ಯಾಚರಣೆ ನಡೆಸಿತ್ತು. ಸುದ್ದಿ ಪ್ರಸಾರವಾದ ಬಳಿಕ ಸರ್ಕಾರ ವೈದ್ಯರ ಬಯೋವುಟ್ರಿಕ್ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕಿಮ್ಸ್ ನಿರ್ದೇಶಕರಿಂದ ಪಡೆದುಕೊಂಡಿತ್ತು. ವೈದ್ಯರು ಲೋಪವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರ ವೈದ್ಯರನ್ನು ಅಮಾನತುಗೊಳಿಸಿ ತನಿಖೆ ಮುಂದುವರಿಸಿದೆ.
ವ್ಯಕ್ತಿ ನಾಪತ್ತೆ: ದೂರು
ಹುಬ್ಬಳ್ಳಿ: ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದ ಕೇಶ್ವಾಪುರದ ಬೆಂಗೇರಿ ಕೆಂಚಪ್ಪನ ತೋಟದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಂಚಪ್ಪನ ತೋಟದ ದುರ್ಗಪ್ಪ ಕಬ್ಬೇರ, ತನ್ನ ಪತ್ನಿಗೆ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಕೆಲವು ದಿನಗಳ ಹಿಂದೆ ಮನೆಯಿಂದ ಹೋಗಿದ್ದು, ಈವರೆಗೂ ಮರಳಿ ಬಂದಿಲ್ಲ ಎಂದು ದುರ್ಗಪ್ಪನ ಪತ್ನಿ ಹನುಮವ್ವ ದುರ್ಗಪ್ಪ ಕಬ್ಬೇರ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.