ನಾಳೆ ವಾರ್ಷಿಕ ಮಹಾಸಭೆ
ಹುಬ್ಬಳ್ಳಿ: ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ್ ಕೋ-ಆಪ್ರೇಟಿವ್ ಕ್ರೆಡಿಟ್ ಸೊಸೈಟಿಯ 13ನೇ ವಾರ್ಷಿಕ ಮಹಾಸಭೆ ಸೆ. 30ರಂದು ನಡೆಯಲಿದೆ. ಇಲ್ಲಿಯ ಜೆ.ಸಿ. ನಗರದಲ್ಲಿರುವ ಮಹಾನಗರ ಪಾಲಿಕೆ ನೌಕರರ ಸಭಾಭವನದಲ್ಲಿ ಅಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ವಹಿಸುವರು. ಸೊಸೈಟಿಯ ಎಲ್ಲ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೊಸೈಟಿ ಕಾರ್ಯದರ್ಶಿ ತಿಳಿಸಿದ್ದಾರೆ.
ಉಚಿತ ಸ್ವರ್ಣ ಪ್ರಾಶನ ನಾಳೆ
ಹುಬ್ಬಳ್ಳಿ: ನಗರದ ಸಿಬಿಟಿಯಲ್ಲಿರುವ ಅನುಗ್ರಹ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಸೆ. 30ರ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ 7 ವರ್ಷದೊಳಗಿನ ಮಕ್ಕಳಿಗೆ ಸ್ವರ್ಣ ಪ್ರಾಶನ ಮಾಡಿಸಲಾಗುತ್ತದೆ. ವಿಕಲಚೇತನ ಮಕ್ಕಳಿಗೆ ಉಚಿತ ಸ್ವರ್ಣ ಪ್ರಾಶನ ನೀಡಲಾಗುವುದು. ಮಾಹಿತಿಗೆ ಮೊ: 97398 65460, ದೂ: 0836 2335115 ಸಂಪರ್ಕಿಸಲು ಡಾ. ಶ್ರೀಗೌರಿ ಅಂಗಡಿ ತಿಳಿಸಿದ್ದಾರೆ.
ಪಶ್ಚಿಮ ರೇಲ್ವೆ ತಂಡ ಪ್ರಥಮ
ಹುಬ್ಬಳ್ಳಿ: ಅಖಿಲ ಭಾರತೀಯ ರೇಲ್ವೆ ಚೆಸ್ ಚಾಂಪಿಯನ್ಶಿಪ್ನ ತಂಡ ವಿಭಾಗದಲ್ಲಿ ಪಶ್ಚಿಮ ರೇಲ್ವೆ ಪ್ರಥಮ ಸ್ಥಾನ ಪಡೆದಿದೆ. ರನ್ನರ್ ಅಪ್ ಸ್ಥಾನವನ್ನು ದಕ್ಷಿಣ ರೇಲ್ವೆ ಪಡಿದಿದೆ. ನೈಋತ್ಯ ರೇಲ್ವೆ ಆಯೋಜಿಸಿದ್ದ 26ನೇ ಅಖಿಲ ಭಾರತೀಯ ರೇಲ್ವೆ ಚೆಸ್ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ನೈಋತ್ಯ ರೈಲ್ವೆ ವಲಯ ಮಹಾಪ್ರಬಂಧಕ ಅಶೋಕ ಮಿತ್ತಲ್ ಟ್ರೋಫಿ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

