ಧಾರವಾಡ

ಮುಖ್ಯವಾಹಿನಿಗೆ ಬನ್ನಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 6
ಕೇವಲ ಬೆರಳಣಿಕೆಯ ಕವಿಗಳು ಹಿಂದೆ ಕಾಣಸಿಗುತ್ತಿದ್ದರು. ಈಗ ಪರಿಸ್ಥಿತಿ ಮೊದಲಿನ ಹಾಗೆ ಇಲ್ಲ. ಹಲವಾರು ಯುವ ಕವಿಯಿತ್ರಿಯರು ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದು ದೂರದರ್ಶನ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಹಾಗೂ ಕವಿಯಿತ್ರಿಯೂ ಆದ ಎಚ್.ಎನ್. ಆರತಿ ಹೇಳಿದರು.
ಹುಬ್ಬಳ್ಳಿಯ ಕನ್ನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಕ್ಷಯ ಕಾಲೋನಿಯ ಕೆ.ಎ. ದೊಡ್ಡಮನಿ ಅವರ ಮನೆಯಲ್ಲಿ ಹಮ್ಮಿಕೊಂಡ ಮನೆ ಮನೆಯಲ್ಲಿ ಸಾಹಿತ್ಯ ಸಂಜೆ ವಸಂತೋತ್ಸವ ಕಾವ್ಯಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಕವಿತೆಯ ಸಾರ್ವಭೌಮತ್ವವನ್ನ್ನು ಪ್ರತಿಭಾನಂದ ಕುಮಾರ, ಸುನಂದಾ ಕಡಮೆ, ನಾಗಭೂಷಣನಂತಹ ಕೆಲವೇ ಕೆಲವು ಹೆಣ್ಣುಮಕ್ಕಳು ವಹಿಸಿಕೊಂಡಿದ್ದರು. ಆದರೆ ಇಂದು ಚೇತನಾ ತೀರ್ಥಹಳ್ಳಿ, ಸ್ಫೂರ್ತಿ, ಕಾವ್ಯ ಕಡಮೆ, ವಿಶಾಲಾಕ್ಷಿ ಮುಂತಾದ ಯುವ ಕವಿಯಿತ್ರಿಗಳ ಕಾವ್ಯಸೃಷ್ಟಿ ಅದ್ಭುತ. ಇಂದು ಕಾವ್ಯಲೋಕ ಸಂಭ್ರಮದಲ್ಲಿದೆ ಎಂದರು.
ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಕವಿಯಲ್ಲಿ ಒಬ್ಬ ಸಹೃದಯನಿದ್ದಾನೆ. ಕವಿತೆ ಸಮಾಜವನ್ನ್ನು ತಿದ್ದಬಲ್ಲದು, ಸಮಾಜವನ್ನ್ನು ಪರಿವರ್ತಿಸಬಲ್ಲದು. ಸಾರ್ವಕಾಲಿಕ ಪ್ರಸ್ತುತತೆ ಕವಿತೆಯ ಪ್ರಮುಖ ಲಕ್ಷಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕವಿ ಎಂ.ಡಿ. ಗೊಗೇರಿ ಮಾತನಾಡಿ, ಕವಿಗಳಿಗೆ ತಮ್ಮ ಕವನ ಓದಲು ತುಂಬಾ ಸಂತೋಷವೆನಿಸುತ್ತದೆ. ಕಾರಣ ಅದರಲ್ಲಿ ಕವಿ ತಾನು ಅನುಭವಿಸಿದ ಘಟನೆ, ಅನುಭವ, ಚಿಂತನೆ ಅಡಕವಾಗಿರುತ್ತದೆ. ಕವಿತೆಯ ಕೇಳುಗನೂ ಸಹೃದನಾಗಿರುವುದು ಅಷ್ಟೇ ಮುಖ್ಯ. ಬರೀ ಗಾಂಭೀರ್ಯತೆ ತುಂಬಿದ ಕವನಗಳು ಓದುಗನನ್ನು ಹಿಡಿದಿಡಲಾರವು. ಅವುಗಳಲ್ಲಿ ನವಿರಾದ ಹಾಸ್ಯ, ವಿಡಂಬನೆ ಇರಬೇಕು ಎಂದು ಹೇಳಿದರು. ಕವಿಗಳಾದ ಸಿ.ಎಂ. ಚನ್ನಬಸಪ್ಪ್ನ, ಪದ್ಮಜಾ ಉಮರ್ಜಿ, ಸಂಧ್ಯಾ ದೀಕ್ಷಿತ, ಎಸ್.ವಿ. ಪಟ್ಟಣಶೆಟ್ಟಿ, ರತ್ನಾ ಅಂಗಡಿ, ಎಸ್.ಆರ್. ಅಶ್ನಿ, ದ್ರಾಕ್ಷಾಯಿಣಿ ಹಿರೇಮಠ, ಮಹಾಂತಪ್ಪ ನಂದೂರ, ಮಂಗಳಾ ನರವಣಿ, ಮುನಿಸ್ವಾಮಿ ಪ್ರತೀಕ್ಷೆ, ವಿರೂಪಾಕ್ಷ ಕಟ್ಟೀಮನಿ, ಗಾಯತ್ರಿ ರವಿ, ಕೆ.ಎ. ದೊಡ್ಡಮನಿ, ಅರುಣಾ ಶಿರಗುಪ್ಪಿ, ಸುನಿತಾ ಹುಬ್ಳೀಕರ, ಶೈಲಜಾ, ವೀರಣ್ಣಾ ಹೂಲಿ ಮತ್ತಿತರರು ಕವಿತೆ ವಾಚಿಸಿದರು. ಗೌರವ ಕೋಶಾಧ್ಯಕ್ಷರಾದ ವಿಜಯಲಕ್ಷ್ಮಿ ಕಟ್ಟೀಮಠ, ಪ್ರೊ. ಕೆ. ಎಸ್. ಕೌಜಲಗಿ, ಲಿಂಗರಾಜ ರಾಮಾಪುರ, ಮೃತ್ಯುಂಜಯ ಮಟ್ಟಿ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.