ಧಾರವಾಡ

ರಾಹುಲ್ ಬರಮಾಡಿಕೊಂಡ ಸಿಎಂ

Published On :

ಹುಬ್ಬಳ್ಳಿ: ಸೋಮವಾರ ಶಿರಸಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಹೋಗಲು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬೆಳಗ್ಗೆ ಬಂದಿಳಿದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಸಿ. ಎಂ. ಇಬ್ರಾಹಿಂ, ರಾಹುಲ್ ಗಾಂಧಿಯವರನ್ನು ಬರ ಮಾಡಿಕೊಂಡರು. ಆ ಬಳಿಕ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದರು. ನಂತರ ಶಿರಸಿಗೆ ಹೆಲಿಕ್ಯಾಪ್ಟರ್ ಮುಖಾಂತರ ಹೊರಟರು.


ಮತದಾನ ಜಾಗೃತಿ ಕಾರ್ಯಕ್ರಮ
ಹುಬ್ಬಳ್ಳಿ:  ಲೋಕಸಭೆ ಚುನಾವಣೆಗೆ ಮತದಾರರು ತಪ್ಪದೇ ಮತಚಲಾಯಿಸಬೇಕೆಂಬ ಸ್ವೀಪ್ ಸಮಿತಿಯ ಕಾಳಜಿಗೆ ಧಾರವಾಡದ ಸುವರ್ಣ ಲೇಡೀಸ್ ಕ್ಲಬ್ನ ಸಾಥ್ ನೀಡಿದ್ದಾರೆ. ಸೋಮವಾರ ಸಂಜೆ ನಾರಾಯಾಣಪುರದ ಲಕ್ಷ್ಮೀದೇವಿ ದೇವಸ್ಥಾನದ ಎದುರಿನಿಂದ  ಮತದಾನ ಜಾಗೃತಿ ಕುರಿತ ಪ್ರಚಾರ ಫಲಕಗಳನ್ನು ಹಿಡಿದು, ಘೋಷಣೆ ಕೂಗುತ್ತ, ಮತದಾನ ಜಾಗೃತಿ ಗೀತೆ ಹಾಡುತ್ತ, ಬಡಾವಣೆಯ ರಸ್ತೆಗಳಲ್ಲಿ ಕ್ಲಬ್ ಸದಸ್ಯೆಯರು ಸಂಚರಿಸಿದರು.  

ನಾಳೆ ಸ್ವೀಪ್ ಕಾರ್ಯಕ್ರಮ
ಹುಬ್ಬಳ್ಳಿ:  ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಮತದಾರರ ಭಾಗವಹಿಸುವಿಕೆ (ಸ್ವೀಪ್) ಅಭಿಯಾನ ಕಾರ್ಯಕ್ರಮ್ನ ಏ. 9ರಂದು ಧಾರವಾಡ ಆಕಾಶವಾಣಿ ಕೇಂದ್ರ ನಿರ್ದೇಶಕರಾದ ಸಿ.ಯು.ಬೆಳ್ಳಕ್ಕಿ ಅವರು ಉದ್ಘಾಟಿಸುವರು. ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನ್ನು ಕುಲಪತಿ ಡಾ. ಟಿ.ಆರ್. ಸುಬ್ರಹ್ಮಣ್ಯ ವಹಿಸಲಿದ್ದು, ಮತ್ತಿತರರು ಗಣ್ಯರು ಆಗಮಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.