ಧಾರವಾಡ

ಬಿಜೆಪಿಗೆ ಪಾಠ ಕಲಿಸಿ

Published On :

ಹುಬ್ಬಳ್ಳಿ: ಕೋಮುವಾದ ಹಾಗೂ ಜಾತ್ಯತೀತವಾದ ಮಧ್ಯೆ ಪ್ರಸಕ್ತ ಲೋಕಸಭೆ ಚುನಾವಣೆ ನಡೆಯಲಿದ್ದು, ಮುಸ್ಲಿಂ ಬಾಂಧವರೆಲ್ಲರೂ ಏಕತ್ರವಾಗಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕಿದೆ ಎಂದು ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ರೆಹಮಾನ್ ಖಾನ್ ಹೇಳಿದರು.
ಹಳೆಹುಬ್ಬಳ್ಳಿಯ ಇಸ್ಲಾಂಪುರ ರಸ್ತೆಯ ಗೌಸಿಯಾ ಟೌನ್‌ದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ಮುಸ್ಲಿಂ ರೈಟ್ಸ್ ಫೌಂಡೇಶನ್ ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಏ. 17ರ ಚುನಾವಣೆ ಪಕ್ಷ ಹಾಗೂ ಅಭ್ಯರ್ಥಿಗಳ ನಡುವೆ ನಡೆಯುತ್ತಿಲ್ಲ. ಇಸ್ಲಾಂ ಧರ್ಮಾಚರಣೆಗೆ ಅಡ್ಡಿಯನ್ನುಂಟು ಮಾಡುವುದು, ಸಂಘರ್ಷಕ್ಕೆ ದಾರಿ ಮಾಡಿಕೊಡುವ ಕಾಮನ್ ಸಿವಿಲ್ ಕೋರ್ಟ್ ಸ್ಥಾಪನೆಗೆ ಮುಂದಾಗಿರುವ ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು.
ಮುಸ್ಲಿಮರ ಅಭಿವೃದ್ಧಿಗೆ ಕ್ರಮ: ಮೂರನೇ ಅವಧಿಗೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಕ್ರಿಮಿನಲ್ ಟಾರ್ಗೆಟ್ ಕಾಯ್ದೆ ಜಾರಿಗೆ ತರಲಾಗುವುದು. ಅಲ್ಪಸಂಖ್ಯಾತ ಸಮುದಾಯಕ್ಕೆ ಅನುಕೂಲವಾಗುವ ರಂಗನಾಥ ಮಿಶ್ರಾ ಆಯೋಗದ ವರದಿಯ 69 ಬೇಡಿಕೆಗಳಲ್ಲಿ 66ನ್ನು ಪೂರೈಸಲಾಗಿದೆ. ಇದೇ ರೀತಿಯಾಗಿ ಸಾಚಾರ್ ಕಮಿಟಿ ವರದಿ ಅನುಷ್ಠಾನಕ್ಕೂ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇಂದು ಇಂದು ಮುಸ್ಲಿಂ ಮಕ್ಕಳಿಗೆ ಶಿಷ್ಯವೇತನ ದೊರಕುತ್ತದೆ. ವಕ್ಫ್ ಮಂಡಳಿ ಆಸ್ತಿಗಳನ್ನು ಸಮಾಜಕ್ಕೆ ಪರಭಾರೆ ಮಾಡುವುದಕ್ಕೂ ಕಾಂಗ್ರೆಸ್ ಉದ್ದೇಶಿಸಿದೆ ಎಂದರು.
ಮಾಹಿತಿ ಮತ್ತು ಹಜ್ ಕಮಿಟಿ ಸಚಿವ ರೋಶನ್ ಬೇಗ್, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳಲು ಈಗ ಕಾಲ ಸೂಕ್ತವಾಗಿದೆ. ಎಲ್ಲ ಮುಸ್ಲಿಂರು ಒಂದಾಗಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್, ಶಾಸಕ ಪ್ರಸಾದ ಅಬ್ಬಯ್ಯ, ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿದರು. ಶಾಸಕ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಮಾಜಿ ಸಂಸದ ಪ್ರೊ೤ ಐ.ಜಿ. ಸನದಿ, ಮಂಜುನಾಥ ಕುನ್ನೂರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಜಬ್ಬಾರಖಾನ್ ಹೊನ್ನಳ್ಳಿ, ಕೆಪಿಪಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡ್ಯಯ, ಎಸ್.ಆರ್. ಮೋರೆ, ರಾಣಿ ಸತೀಶ, ಅನ್ವರ್ ಮುಧೋಳ, ಇಸ್ಮಾಯಿಲ್ ತಮಟಗಾರ, ಗಣೇಶ ಟಗರಗುಂಟಿ, ಮಹೇಂದ್ರ ಸಿಂಘಿ, ರಾಜಶೇಖರ ಮೆಣಸಿನಕಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.