ಧಾರವಾಡ

ಹುಬ್ಬಳ್ಳಿ-ಧಾರವಾಡ ಗೆಲವು

Published On :

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಧಾರವಾಡ ವಲಯದ 16 ವರ್ಷದೊಳಗಿನ ಅಂತರ್ ಜಿಲ್ಲಾ ಕ್ರಿಕೆಟ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ಧಾರವಾಡ ಮತ್ತು ಹುಬ್ಬಳ್ಳಿ ತಂಡಗಳು ಗೆಲುವು ಪಡೆದಿವೆ.
ಧಾರವಾಡ ಮತ್ತು ಕಾರವಾರ ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಧಾರವಾಡ ತಂಡ 166 ರನ್‌ಗಳ ಭರ್ಜರಿ ಜಯ ಪಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಧಾರವಾಡ ತಂಡ 45 ಓವರ್‌ಗಳಲ್ಲಿ 9 ವಿಕೆಟ್‌ಗೆ 212 ರನ್ ಗಳಿಸಿತು. ನಿಹಾಲ್ ಶೆಟ್ಟಿ 87 ರನ್ ಗಳಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕಾರವಾರ ತಂಡದ ಅವಿನಾಶ 5 ವಿಕೆಟ್ ಮತ್ತು ಲಕ್ಷ್ಮಣ ನೊರ್ಜೆ 2 ವಿಕೆಟ್ ಕಬಳಿಸಿದರು. ರೋಹಿತ್ ನಾಯಕ ಮತ್ತು ಪ್ರೀತಮ್ ಗುಂಜಿ ತಲಾ 1 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್‌ಗೆ ಇಳಿದ ಕಾರವಾರ ತಂಡ ಕಳಪೆ ಪ್ರದರ್ಶನದಿಂದಾಗಿ 16.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 46 ರನ್ ಗಳಿಸಿತು. ಧಾರವಾಡ ತಂಡದ ಸಮ್ಯಕ್ 5 ವಿಕೆಟ್ ಪಡೆದರೆ, ಪರಿಶಿತಲ್ ಮತ್ತು ನಿಝಾಮ್ ತಲಾ 2 ವಿಕೆಟ್ ಪಡೆದರು.
ಮತ್ತೊಂದೆಡೆ ಗದಗ-ಹುಬ್ಬಳ್ಳಿ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗದಗ ತಂಡ, 30.1 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 87 ರನ್ ಗಳಿಸಿತು. ಲಕ್ಷ್ಮೀನಾರಾಯಣ ಮಿಸ್ಕಿನ್ (29 ರನ್) ಹೊರತುಪಡಿಸಿದರೆ ತಂಡದ ಯಾವುದೇ ಆಟಗಾರ ಮೈದಾನದಲ್ಲಿ ಹೆಚ್ಚು ಸಮಯ ನಿಲ್ಲಲಿಲ್ಲ. ಹುಬ್ಬಳ್ಳಿ ತಂಡದ ಸಂಜಯ ಹೊನ್ನಂಗಿ 3 ವಿಕೆಟ್ ಪಡೆದರೆ, ಸಾದಿಕ್ ನದಾಫ ಮತ್ತು ವೀರೇಶ ಹಿರೇಮಠ ತಲಾ 2 ವಿಕೆಟ್ ಹಾಗೂ ನಿರ್ಮಲ ಪಟೇಲ, ಸಚಿನ್ ಬಾರ್ಕಿ ಮತ್ತು ಪ್ರತೀಕ ಶೆಟ್ಟರ ತಲಾ 1 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್‌ಗೆ ಇಳಿದ ಹುಬ್ಬಳ್ಳಿ ತಂಡ, 15.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 90 ರನ್ ಗಳಿಸುವ ಮೂಲಕ ಗದಗ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.
ವೀರೇಂದ್ರ ಸಾಂಬ್ರಾಣಿ 46 ರನ್ ಗಳಿಸುವ ಮೂಲಕ ಉತ್ತಮ ಆಟ ಪ್ರದರ್ಶಿಸಿದರು. ಗದಗ ತಂಡದ ಅಭಿಷೇಕ ಬಡಿಗೇರ 2 ವಿಕೆಟ್ ಹಾಗೂ ಲಕ್ಷ್ಮೀನಾರಾಯಣ ಮಿಸ್ಕಿನ್ 1 ವಿಕೆಟ್ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.