ಧಾರವಾಡ

ಸ್ಪೈಸ್ಜೆಟ್ ಇಂದು ಮರುಹಾರಾಟ

Published On :


ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 22
ಹದ್ದು ಡಿಕ್ಕಿ ಹೊಡೆದಿದ್ದರಿಂದ ಹಾನಿಗೊಳಗಾಗಿ ನಾಲ್ಕು ದಿನಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದುರಸ್ತಿಗೊಳ್ಳುತ್ತಿದ್ದ ಸ್ಪೈಸ್ಜೆಟ್ ವಿಮಾನ ಏ. 23ರಂದು ಮುಂಬಯಿಗೆ ಮರಳುವ ಸಾಧ್ಯತೆ ಇದೆ.
ಆದರೆ ಸ್ಪೈಸ್ಜೆಟ್ ವಿಮಾನ ಹಾರಾಟ ಪ್ರಾರಂಭಿಸಬೇಕಿದ್ದರೆ ವಿಮಾನ ಎಲ್ಲ ರೀತಿಯಿಂದಲೂ ಸರಿಯಾಗಿರುವುದರ ಬಗ್ಗೆ ತಂತ್ರಜ್ಞರ ಫಿಟ್ನೆಸ್ ಸರ್ಟಿಫಿಕೇಟ್ ಅಗತ್ಯ. ಮುಂಬಯಿ ಹಾಗೂ ದಿಲ್ಲಿಯಿಂದ ಬಂದಿರುವ ಪರಿಣಿತರ ತಂಡ ವಿಮಾನದ ದುರಸ್ತಿ ಪೂರ್ಣಗೊಳಿಸಿದ್ದು, ವಿಮಾನ ಹಾರಾಟಕ್ಕೆ ಎಲ್ಲ ರೀತಿಯಿಂದ ಸಜ್ಜುಗೊಂಡಿರವ ಬಗ್ಗೆ ಲಿಖಿತ ಪ್ರಮಾಣಪತ್ರ ನೀಡಬೇಕು. ಆಗ ಮಾತ್ರ ವಿಮಾನಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹಾರಾಟ ಪ್ರಾರಂಭಿಸಲು ಅನುಮತಿ ದೊರೆಯುತ್ತದೆ.
ಮಂಗಳವಾರ ಸಂಜೆಯವರೆಗೂ ಪರಿಣಿತರ ತಂಡ ಸ್ಪೈಸ್ಜೆಟ್ ವಿಮಾನ ಹಾರಾಟಕ್ಕೆ ಸಂಪೂರ್ಣ ರೀತಿಯಲ್ಲಿ ಸಜ್ಜುಗೊಂಡಿರುವ ಕುರಿತ ಪ್ರಮಾಣ ಪತ್ರವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಬಸವರಾಜು ಅವರಿಗೆ ನೀಡಿಲ್ಲ. ಬುಧವಾರ ಬೆಳಗ್ಗೆ ಪರಿಣಿತರ ತಂಡ ವಿಮಾನದ ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಸಾಧ್ಯತೆ ಇದೆ.
ಈ ವಿಮಾನ ಪ್ರಯಾಣಿಕರಿಲ್ಲದೆ ಮುಂಬಯಿಗೆ ಮರಳಲಿದೆ. ಬುಧವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಡುವ ಸಾಧ್ಯತೆ ಇದೆ.
ದಿಲ್ಲಿ-ಜಬಲಪುರ-ಮುಂಬಯಿ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಮುಂಬಯಿಯಿಂದ ಏ. 19ರಂದು ಮಧ್ಯಾಹ್ನ 2.30ಕ್ಕೆ ಬಂದಿಳಿದು ರನ್ ವೇಯಲ್ಲಿ ಸಾಗುತ್ತಿದ್ದಾಗ ಹದ್ದು ಡಿಕ್ಕಿ ಹೊಡೆದು, ವಿಮಾನದ ಮುಂಭಾಗಕ್ಕೆ ಧಕ್ಕೆಯಾಗಿತ್ತು. ಆದರೆ, ಪೈಲಟ್ ಸುರಕ್ಷಿತವಾಗಿ ವಿಮಾನವನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ವಿಮಾನದಲ್ಲಿ 67 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.