ಧಾರವಾಡ

ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

Published On :

ಕಲಘಟಗಿ: ತಾಲೂಕಿನ ಮುಕ್ಕಲ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ತಾಲೂಕು ಕಸಾಪ ಅಧ್ಯಕ್ಷ ಎಂ.ಎಂ. ಪುರದನಗೌಡ್ರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದೇಶಿ ಕ್ರೀಡೆಗಳನ್ನು ಉಳಿಸಿ-ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು. ಗ್ರಾಮೀಣ ಕ್ರೀಡಾಪಟುಗಳಿಗೆ ಮೈದಾನ ಹಾಗೂ ಪ್ರೋತ್ಸಾಹದ ಕೊರತೆ ಬಹಳಷ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನ್ಯಾಯವಾದಿ ಕೆ.ಬಿ. ಗುಡಿಹಾಳ, ಕ್ರೀಡೆಗಳಲ್ಲಿನ ಸೋಲು-ಗೆಲುವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣ ಕ್ರೀಡಪಟುಗಳು ಅಳವಡಿಸಿಕೊಳ್ಳುವ ಮೂಲಕ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
ಪಿ.ಐ. ಕುಂಬಾರ, ಮಂಜುನಾಥ ಕಲಕಟ್ಟಿ, ನಾಗಪ್ಪ ಕನಕಪ್ಪನವರ, ಪ್ರಭು ರಂಗಾಪುರ, ಬಸವಂತಪ್ಪ ಗಬ್ಬೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾ. 2ಕ್ಕೆ ಸಾಹಿತ್ಯ ಸಮ್ಮೇಳನ
ಕಲಘಟಗಿ: ಮಾರ್ಚ್ 2ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಪಟ್ಟಣದಲ್ಲಿ ಜರುಗಿದ ಸಾಹಿತಿ-ಕಲಾವಿದರ ಸಭೆ ನಿರ್ಧರಿಸಿದೆ.
ಎಂ.ಆರ್. ತೋಟಗಂಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಪ್ರೇಮಿ ಸಾಹಿತಿ ಕೆ.ಬಿ. ಪಾಟೀಲ ಕುಲಕರ್ಣಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಲ್.ಆರ್. ಅಂಗಡಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಎಂ. ಪುರದನಗೌಡ್ರ, ನ್ಯಾಯವಾದಿ ಬಿ.ವೈ. ಪಾಟೀಲ, ಪ್ರೊ. ಬಿ.ಜಿ. ಬಿದರಿ ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ವಿನಂತಿಯ ಮೇರೆಗೆ ಸಮ್ಮೇಳನವನ್ನು ಹಿರೇಹೊನಹಳ್ಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಾಹಿತಿ ಪುರದನಗೌಡ್ರ ಮಾಧ್ಯಮದವರೊಂದಿಗೆ ಮಾತನಾಡಿ ವಿವರಿಸಿದರು.
ಪ್ರೊ. ಕೆ.ಸಿ. ಮಲ್ಲಿಗವಾಡ, ರೈತ ಧುರೀಣ ಬಿ.ಸಿ. ಪಾಟೀಲ ಸೇರಿದಂತೆ ಮತ್ತಿತರರಿದ್ದರು.
ಯುವಶಕ್ತಿ ಬಲಿಷ್ಠಗೊಳ್ಳಲಿ: ಜಾಕೋಬ್
ಕಲಘಟಗಿ: ಯುವಶಕ್ತಿಯನ್ನು ಗ್ರಾಮಗಳಲ್ಲಿ ಬಲಿಷ್ಠಗೊಳಿಸುವ ಮೂಲಕ ಸಾಮಾಜಿಕ ಅನಿಷ್ಟಗಳ ನಿರ್ಮೂಲನೆಗೆ ಯೋಜನೆಗಳನ್ನು ರೂಪಿಸಬೇಕು ಎಂದು ಬಿಡಿಎಸ್ಎಸ್ ಸಂಸ್ಥೆ ನಿರ್ದೇಶಕ ಫಾದರ್ ಜಾಕೋಬ್ ಹೇಳಿದರು.
ತುಮರಿಕೊಪ್ಪದ ಸೆಂಟ್ ಝೇವಿಯರ್ ಹೈಸ್ಕೂಲ್ನಲ್ಲಿ ಬಿಡಿಎಸ್ಎಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಎರಡು ದಿನಗಳ ಯುವಜನ ಮಾರ್ಗದರ್ಶಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಶಕ್ತಿ ಜಾಗೃತಗೊಂಡರೆ ದೇಶದಲ್ಲಿ ಏನ್ನೆಲ್ಲ ಬದಲಾವಣೆ ತರಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದರು.
ಸಿಎಸಿಎಲ್ಕೆ ಸಂಸ್ಥೆ ರಾಜ್ಯ ಸಂಚಾಲಕ ಅಶೋಕ ಯರಗಟ್ಟಿ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಾಜಿ ಚವ್ಹಾಣ, ಚಾರ್ಲ್ಸ್ ಕಲಘಟಗಿ, ನಾರಾಯಣ ಗರಗ, ಕೆ. ಬಿ. ಕಟ್ಟಿಮನಿ, ಮಂಜುಳಾ ಹೂಗಾರ ಸೇರಿದಂತೆ ಮತ್ತಿತರರಿದ್ದರು.
ಸಕಾಲದಲ್ಲಿ ಮಾಸಾಶನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಕಲಘಟಗಿ, ಫೆ. 23
ವಿಕಲಚೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಮತ್ತಿತರ ಸೌಲಭ್ಯಗಳು ಫಲಾನುಭವಿಗಳಿಗೆ ಸಕಾಲದಲ್ಲಿ ಸಂದಾಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ತಾಲೂಕು ಸಮಿತಿ ಆಗ್ರಹಿಸಿದೆ.
ತಾಲೂಕಿನ ಬೆಂಡಲಗಟ್ಟಿ, ಬಿರವಳ್ಳಿ, ಸಮನಕೊಪ್ಪ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ವಾಸವಾಗಿರುವ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಮಾಸನ ಲಭ್ಯವಾಗದೇ ಇರುವುದರಿಂದ ಜನರು ಪರದಾಡುವಂತಾಗಿದೆ ಎಂದು ತಿಳಿಸಿದ ಮನವಿಯನ್ನು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.
ಈ ಮೊದಲು ಇದ್ದಂತೆಯೇ ಫಲಾನುಭವಿಗಳಿಗೆ ಅಂಚೆ ಮನಿ ಆರ್ಡರ್ ಮೂಲಕ ಮಾಶಾಸನ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದೂ ಸಮಿತಿ ಆಗ್ರಹಿಸಿದೆ.
ಜಿಲ್ಲಾ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ರಡ್ಡೇರ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪರುಶುರಾಮ ದುಂಡಿ, ಎಂ.ಸಿ. ಹೊರಕೇರಿ, ಎನ್.ವೈ. ಕನಕಪ್ಪನವರ, ಬಸಮ್ಮ ಮುಗಳಿ, ರಾಜೇಂದ್ರ ಉಪ್ಪಾರ, ಭೀಮಪ್ಪ ದುಂಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸಮಾಜದ ಅರಿವಿರಲಿ
ಧಾರವಾಡ: ವಿದ್ಯಾರ್ಥಿಗಳು ತಮ್ಮನ್ನು ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳದೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಆಗುಹೋಗುಗಳನ್ನು ಅರಿಯಬೇಕು ಎಂದು ಪಾಲಿಕೆ ಸದಸ್ಯ ಬಲರಾಮ ಕುಸುಗಲ್ ಹೇಳಿದರು.
ಹಳೇ ಶ್ರೀನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ನಡೆದ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಕಟ್ಟುವ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಇದೆ. ಯುವಶಕ್ತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಪ್ರಾಧ್ಯಾಪಕ ಡಾ. ಬಸವರಾಜ ತಲ್ಲೂರ, ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಹೊಸ ರೂಪ ಕೊಡಲು ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ ಎಂದರು. ಸಂಘದ ಅಧ್ಯಕ್ಷ ಅಮರೇಶ ಅಮರಗೋಳ, ಮಹೇಶ ತಲ್ಲೂರ, ಪ್ರಭು ಕೊಂಗಿ, ಸಂದೀಪ ನಿಡಗುಂದಿ, ನಂದೀಶ ಕಡಕೋಳ, ರಾಜು ನಾಯಕನೂರ, ಗಿರೀಶ ಕೊಂಗಿ, ಮಹೇಶ ಎನ್.ಎಂ. ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.