7 ಸಬ್ಇನ್ಸ್ಪೆಕ್ಟರ್ ವರ್ಗಾವಣೆ
ಹುಬ್ಬಳ್ಳಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಒಂದೇ ಠಾಣೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಾಗೂ ಸ್ವಕ್ಷೇತ್ರದ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಏಳು ಸಬ್ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ.
ಮಹಾನಗರ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಸೋಮವಾರ ವರ್ಗಾವಣೆಯ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಆದೇಶದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಗೋಕುಲ ಠಾಣೆಯ ಪಿಎಸ್ಐ ಎಸ್. ಬಿ. ಕುರಗೋಡಿಯವರನ್ನು ವಿದ್ಯಾಗಿರಿ ಠಾಣೆಗೆ, ನೀಲೇಶ ಚವ್ಹಾಣ ಕೇಶ್ವಾಪುರದಿಂದ ಧಾರವಾಡ ಉಪನಗರ ಠಾಣೆಗೆ, ಶ್ರೀಶಾಂತಿ ಮಹಿಳಾ ಠಾಣೆಯಿಂದ ಘಂಟಿಕೇರಿ, ಆರ್.ಎಸ್. ಲಮಾಣಿ ಹುಬ್ಬಳ್ಳಿ ನಗರ ಠಾಣೆಯಿಂದ ಧಾರವಾಡ ಸಂಚಾರಿ, ಆರ್.ಡಿ. ನೀಲಣ್ಣನವರ ಧಾರವಾಡ ಉಪನಗರ ಠಾಣೆಯಿಂದ ಕೇಶ್ವಾಪುರ ಠಾಣೆಗೆ, ಕೆ.ವೈ. ದೊಡ್ಡಮನಿ ವಿದ್ಯಾಗಿರಿಯಿಂದ ಗೋಕುಲ್ ಠಾಣೆ, ಕಿರಣಕುಮಾರ ತಾವರಗಿ ಧಾರವಾಡ ಸಂಚಾರಿಯಿಂದ ಹುಬ್ಬಳ್ಳಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇದಾದ ಬಳಿಕ ಇನ್ಸ್ಪೆಕ್ಟರ್ ಮತ್ತು ಮೇಲ್ಮಟ್ಟದ ಅಧಿಕಾರಿಗಳ ವರ್ಗಾವಣೆ ಆದೇಶವೂ ಇಷ್ಟರಲ್ಲಿಯೇ ಹೊರ ಬೀಳುವ ಸಾಧ್ಯತೆ ಇದೆ.
ಚುನಾವಣೆಯ ಹಿನ್ನೆಲೆಯಲ್ಲಿ ಏಳು ಪಿಎಸ್ಐಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಶಿಕ್ಷೆಯ ರೂಪದಲ್ಲಿ ಹುಬ್ಬಳ್ಳಿ-ಧಾರವಾಡದ ಮಧ್ಯೆ ವರ್ಗಾವಣೆಗೊಂಡಿದ್ದ ಪೇದೆಗಳ ಪೈಕಿ ಅರ್ಹರನ್ನು ಗುರುತಿಸಿ ಇಷ್ಟರಲ್ಲಿಯೇ ವರ್ಗಾವಣೆ ಮಾಡುವ ಕುರಿತು ಚಿಂತನೆ ನಡೆದಿದೆ. ಹೆಚ್ಚಿನ ಆರೋಪ ಹೊತ್ತವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವುದಿಲ್ಲ.
- ರವೀಂದ್ರಪ್ರಸಾದ,ಮಹಾನಗರ ಪೊಲೀಸ್ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

