ಧಾರವಾಡ

ಅಮೃತ ಮಹೋತ್ಸವ ಸಮಾರೋಪ 6ರಂದು

Published On :

ಧಾರವಾಡ: ಇಲ್ಲಿನ ಮಾಳಮಡ್ಡಿ ಕೆ.ಇ.ಬೋರ್ಡ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಜ. 6ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ. ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ರಾಜ್ಯದ ಕಾನೂನು ಆಯೋಗದ ಆಧ್ಯಕ್ಷರು ಮತ್ತು ಕೇರಳ ಹೈಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ವಿ.ಎಸ್. ಮಳಿಮಠ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಎಜ್ಯುಕೇಶನ್ ಬೋರ್ಡ್ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಹಾಗೂ ಕೆ. ಇ. ಬೋರ್ಡ್ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎಲ್. ಪಾಟೀಲ ಭಾಗವಹಿಸುವರು  ಮಾಹಿತಿಗೆ 0836-2445433 ಮುಖಾಂತರ ಸಂಪರ್ಕಿಸಬಹುದು.
ಧಾರವಾಡ: ಇಂದಿನಿಂದ ನಾಟಕೋತ್ಸವ ಆರಂಭ
ಧಾರವಾಡ: ಧಾರವಾಡ ಥಿಯೇಟರ್ಸ್ ವತಿಯಿಂದ ಜ. 2 ಹಾಗೂ 3ರಂದು ವಿದ್ಯಾವರ್ಧಕ ಸಂಘದಲ್ಲಿ ಅಂತರ್ ಶಾಲಾ ಮಕ್ಕಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಜ. 2ರ ಮಧ್ಯಾಹ್ನ 3ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ಡಿ. ಹಿರೇಗೌಡರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜ. 3ರಂದು ಸಂಜೆ 6:30ಕ್ಕೆ ನಡೆಯುವ ಸಮಾರೋಪದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ, ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಜಾನನ ಮಹಾಲೆ, ರಂಗ ಕಲಾವಿದ ವಿಜಯ ದೊಡಮನಿ ಹಾಗೂ ದೀಪಕ ಮಹಾಲೆ ಭಾಗವಹಿಸುವರು. ನಾಟಕ ಸ್ಪರ್ಧೆ ವಿಜೇತ ತಂಡಗಳಿಗೆ ಹಾಗೂ ಉತ್ತಮ ಬಾಲ ಕಲಾವಿದರಿಗೆ ಬಹುಮಾನ ವಿತರಿಸಲಾಗುವುದು ಎಂದು ಧಾರವಾಡ ಥಿಯೇಟರ್ಸ್ ಅಧ್ಯಕ್ಷ ಡಾ. ಹ.ವೆಂ. ಕಾಖಂಡಕಿ ತಿಳಿಸಿದ್ದಾರೆ.
ಕೊರೆಗಾಂವ ಯುದ್ಧ ವಿಜಯೋತ್ಸವ
ಧಾರವಾಡ: 1818ರಲ್ಲಿ ನಡೆದ ಕೊರೆಗಾಂವ ಯುದ್ಧದ ಸ್ಮರಣಾರ್ಥ ಬುಧವಾರ ಇಲ್ಲಿನ ರಾಜ್ಯ ಬೀದಿ ಬದಿ, ತಳ್ಳು ಗಾಡಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬ್ರಿಟಿಷರು ಹಾಗೂ ಪೇಶ್ವೆ ಮಧ್ಯೆ ನಡೆದ ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಿ ಮಡಿದ ದಲಿತರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿ ಜನವರಿ 1ರಂದು ಭೀಮಾ ನದಿ ತೀರದಲ್ಲಿರುವ ಯುದ್ಧ ಸ್ಥಳಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು ಎಂದು ಸಂಸ್ಥೆಯ ಲೋಕೇಶ ಮ್ಯಾಗೇರಿ ಹೇಳಿದರು.  ಲಕ್ಷ್ಮಣ ವಾರಂಗ, ಹನುಮಂತ ಚಲವಾದಿ, ರಮೇಶ ಕಾಂಬಳೆ, ನಾಗರಾಜ ಮುಶಣ್ಣವರ, ಭಾಷಾಸಾಬ ನದಾಫ, ವಾಸೀಂ ಕುಸುಗಲ್ ಇದ್ದರು.
ಸಮೀರ ಛಬ್ಬಿಗೆ ಪಿಎಚ್‌ಡಿ
ಧಾರವಾಡ: ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಸಮೀರ್ ಗೋಪಾಲ ಛಬ್ಬಿ ಅವರು ಪ್ರಾಣಿಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ ಕ್ವಿನಾಲಫಾಸ್ ಇನ್‌ಡ್ಯೂಸ್ಡ್ ಬಯೋಕೆವುಕಲ್ ಆ್ಯಂಡ್ ಫ್ಯಾಥೋಫಿಜಿಯೋಲಾಜಿಕಲ್ ಚೇಂಜಿಸ್ ಇನ್ ದಿ ಫ್ರೆಶ್ ವಾಟರ್ ಎಕ್ಜೋಟಿಕ್ ಕಾರ್ಪ್, ಸಿಪ್ರಿನಸ್ ಕಾರ್ಪಿಯೋ (ಲಿನಸ್) ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಸಮೀರ ಅವರಿಗೆ ಕವಿವಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ. ಡೆವಿಡ್ ಮಾರ್ಗದರ್ಶನ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.