ಮಾ. 2ಕ್ಕೆ ಜೈನ ವಧುವರರ ಸಮಾವೇಶ
ಹುಬ್ಬಳ್ಳಿ: ಆಚಾರ್ಯ ಶ್ರೀ 108 ಶಾಂತಿಸಾಗರ ಟ್ರಸ್ಟ್ ವತಿಯಿಂದ ಮಾ.2ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಹುಬ್ಬಳ್ಳಿ ನಗರದ ಮಹಾವೀರ ಗಲ್ಲಿಯಲ್ಲಿರುವ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ದಿಗಂಬರ ಜೈನ ವಧುವರರ ಸಮಾವೇಶ ಆಯೋಜಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನ ದಿಗಂಬರ ಜೈನ ಸಮಾಜದ ವಿವಾಹ ಯೋಗ್ಯ ವಧುವರರು ಸಮಾವೇಶದಲ್ಲಿ ಪಾಲ್ಗೊಳ್ಳಬಹುದು. ಸಮಾವೇಶದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಸ್ವವಿವರ, ಉದ್ಯೋಗ ಮತ್ತು ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಆಚಾರ್ಯ ಶ್ರೀ ಶಾಂತಿಸಾಗರ ಟ್ರಸ್ಟ್ ಹೆಸರಿನಲ್ಲಿ ತೆಗೆದ 600 ಡಿಡಿ ತೆಗೆಸಿ ತವನಪ್ಪ ಪಂಡಿತ ಶಾಂತಿನಾಥ ದಿಗಂಬರ ಜೈನ ಮಂದಿರ, ಮಹಾವೀರ ಗಲ್ಲಿ ಇಲ್ಲಿಗೆ ಫೆ. 15ರೊಳಗೆ ಕಳುಹಿಸಿಕೊಡಬೇಕೆಂದು ಪ್ರಕಟಣೆ ತಿಳಿಸಿದೆ.
ಗಣಿತವೇ ಎಲ್ಲ ಶಾಸ್ತ್ರಗಳಿಗೆ ಆಧಾರ
ಧಾರವಾಡ: ಲೆಕ್ಕಾಚಾರವಿಲ್ಲದೆ ಬದುಕು ಸಾಗಿಸುವುದೇ ದುಸ್ತರ ಎಂಬಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದ್ದರಿಂದ ಎಲ್ಲ ಶಾಸ್ತ್ರಗಳಿಗೆ ಗಣಿತವೇ ಆಧಾರವಾಗಿದೆ ಎಂದು ಭಾರತ ಜ್ಞಾನವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಒಡ್ಡೀನ್ ಹೇಳಿದರು.
ತಾಲೂಕಿನ ಸೋಮಾಪುರದ ಭಾರತಿ ವಿಶ್ವ ಸೇವಾ ಸದನ ಪ್ರೌಢ ಶಾಲೆಯಲ್ಲಿ ಶ್ರೀನಿವಾಸ ರಾಮಾನುಜನರ 126ನೇ ಜನ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಣಿತದ ಭಾಗವಾದ ಸಂಖ್ಯಾಶಾಸ್ತ್ರವು ಮನುಷ್ಯನ ನಿತ್ಯ ಜೀವನದಲ್ಲಿ ಅಭಿವೃದ್ದಿ, ಯೋಜನೆ, ವ್ಯಾಪಾರ ಹಾಗೂ ಕರಾರುವಕ್ಕಾದ ಅಧ್ಯಯನಕ್ಕೆ ಉಪಕಾರಿಯಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಶಾಂತಾ ಕೆಂಗಾರ, ಶ್ರೀನಿವಾಸ ರಾಮಾನುಜನರು ಪ್ರೌಢ ಶಾಲೆಯಲ್ಲಿರುವಾಗಲೇ ವಿಶ್ವದ ಖ್ಯಾತ ಗಣಿತ ತಜ್ಞರ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಅವರಲ್ಲಿನ ಅಪಾರ ಪ್ರತಿಭೆ ಗುರುತಿಸಿದ ಜಿ.ಎಚ್. ಹಾರ್ಡಿಯವರು ಸಂಶೋಧನೆಗೆ ಪ್ರೋತ್ಸಾಹಿಸಿದರು. ರಾಮಾನುಜನರು ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಧೀಮಂತ ಗಣಿತಜ್ಞರಾಗಿದ್ದರೆಂದರು.
ಅಧ್ಯಕ್ಷತೆವಹಿಸಿದ್ದ ನಿರ್ದೇಶಕ ಎಸ್.ಕೆ.ಪಾಟೀಲ, ವಿದ್ಯಾರ್ಥಿಗಳು ರಾಮಾನುಜನರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಗಣಿತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕೆಂದರು. ಎಂ.ಐ. ಪಾಟೀಲ, ಜಿ.ಎಂ.ನಿಡಗುಂದಿ, ಲಕ್ಷ್ಮಿ ಅಣ್ಣಿಗೇರಿ, ಜ್ಯೋತಿ ಹೊಸೂರಮಠ, ಮೋದಿನಬಿ ಡೋಬಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

