ಬೆಳ್ಳಿ ಗಟ್ಟಿ ವಶ: ಇಬ್ಬರ ಬಂಧನ
ಹುಬ್ಬಳ್ಳಿ: ಇಲ್ಲಿನ ಗಾಮಗನಟ್ಟಿ ಕರಿಯಮ್ಮದೇವಿ ಗುಡಿ ಬಳಿ ಅಕ್ರಮವಾಗಿ 15.2 ಕೆಜಿ ತೂಕದ 2 ಬೆಳ್ಳಿ ಗಟ್ಟಿಗಳನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇರ್ಫಾನ್ ನೂರ್‌ಅಹ್ಮದ್ ಶೇಖ್ ಮತ್ತು ಗಣೇಶ ಮಹೇಂದ್ರನಗರ ಎಂದು ಗುರುತಿಸಲಾಗಿದೆ. ಕರಿಯಮ್ಮದೇವಿ ಗುಡಿ ಬಳಿಯ ಬಸ್ ಸ್ಟಾಪ್‌ನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಇಬ್ಬರ ಬಳಿ ದಾಖಲೆ ಇಲ್ಲದ ಎರಡು ಬೆಳ್ಳಿ ಗಟ್ಟಿಗಳು ಲಭಿಸಿವೆ.
ಆಕಸ್ಮಿಕ ಬೆಂಕಿ: ವ್ಯಕ್ತಿಗೆ ಗಾಯ
ಹುಬ್ಬಳ್ಳಿ: ಸೆಟ್ಲ್‌ಮೆಂಟ್ ಕಾಲೋನಿಯಲ್ಲಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಿಸಿ ಒಬ್ಬನಿಗೆ ಬೆಂಕಿ ತಗುಲಿ ಗಾಯಗೊಂಡಿರುವ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಟ್ಲ್‌ಮೆಂಟ್ ಕಾಲೋನಿಯ ತಂತಿ ಓಣಿಯಲ್ಲಿರುವ ಪ್ರಕಾಶ ಲಕ್ಷ್ಮಣ ಇಂದರಗಿ ಅವರ ಮನೆಯಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ಜಗದೀಶ ಎಂಬ ವ್ಯಕ್ತಿಗೆ ಆಕಸ್ಮಿಕ ಬೆಂಕಿ ತಗುಲಿ ಗಾಯಗೊಂಡಿದ್ದಾರೆ ಎಂದು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

