ಭಕ್ತಿಯಿಂದ ಈದ್ ಮಿಲಾದ್ ಆಚರಣೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 14
ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಮಂಗಳವಾರ ನಗರದಲ್ಲಿ ಆಚರಿಸಿದರು.
ಹಬ್ಬದ ಅಂಗವಾಗಿ ಗಣೇಶಪೇಟೆಯ ದರ್ಗಾದಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಪೊಲೀಸ್ ಆಯುಕ್ತ ರವೀಂದ್ರಪ್ರಸಾದ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಪ್ರವಾದಿ ಮೊಹಮ್ಮದ ಪೈಂಗಬರರ ಗುಣಗಾನ ಮಾಡುತ್ತ ಸಾಗಿದ ಮುಸ್ಲಿಮರು, ಶಾ ಬಝಾರ್, ಸಿಬಿಟಿ, ದುರ್ಗದಬೈಲ್, ಕಾಳಮ್ಮನಅಗಸಿ, ಮುಲ್ಲಾನ ಓಣಿ, ಡಾಕಪ್ಪ ಸರ್ಕಲ್, ನ್ಯೂ ಇಂಗ್ಲಿಷ್ ಸ್ಕೂಲ್, ಹಳೆಹುಬ್ಬಳ್ಳಿಯ ಮೂಲಕ ಇಸ್ಲಾಂಪುರದಲ್ಲಿರುವ ಆಸಾರ ಓಣಿಯಲ್ಲಿರುವ ದರ್ಗಾಕ್ಕೆ ತೆರಳಿದರು. ತಡರಾತ್ರಿಯವರೆಗೂ ನಡೆದ ಕಾರ್ಯಕ್ರಮದಲ್ಲಿ ಆಸಾರ ಓಣಿಯ ದರ್ಗಾದಲ್ಲಿರಿಸಲಾಗಿದ್ದ 'ಪವಿತ್ರ ಕೇಶ' ವೀಕ್ಷಿಸಿದ ಸಮಾಜ ಬಾಂಧವರು ಪುನೀತರಾದರು.
ಹೊಸ ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಮುಸ್ಲಿಂ ಬಾಂಧವರು, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಆಯಾ ಮುಸ್ಲಿಂ ಕಮಿಟಿಗಳು ಶರತ್ ಸೇರಿದಂತೆ ಮತ್ತಿತರ ಖಾದ್ಯಗಳನ್ನು ವಿತರಿಸಿದರು.
ಕಣ್ಮನ ಸೆಳೆದವು: ಮೆರವಣಿಗೆಯುದ್ದಕ್ಕೂ ಒಂಟೆ ಹಾಗೂ ಕುದುರೆಗಳು ಸಾಗಿದ್ದು ನೋಡುಗರ ಕಣ್ಮನ ಸೆಳೆದವು. ಒಂಟಿ ಹಾಗೂ ಕುದುರೆಗಳ ಮೇಲೆ ಸವಾರಿ ಮಾಡಿದ ಚಿಣ್ಣರು, ಕುರಾನ್ ಆಯ್ದ ಭಾಗಗಳನ್ನು ಪಠಿಸಿದರು. ಯುವ ಸಮುದಾಯ ಮೆರವಣಿಗೆಯುದ್ದಕ್ಕೂ ಪೈಗಂಬರರ ಗುಣಗಾನ ಮಾಡುತ್ತ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು. ಅಂಜುಮನ್-ಏ-ಇಸ್ಲಾಂ ಸಂಸ್ಥೆ ಅಧ್ಯಕ್ಷರು ಆಗಿರುವ ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಹ್ಮದ ಯುಸೂಫ್ ಸವಣೂರ, ಬಾಬಾಜಾನ ಮುಧೋಳ, ಅನ್ವರ ಮುಧೋಳ, ರಾಜಶೇಖರ ಮೆಣಸಿನಕಾಯಿ, ರಾಜಾ ದೇಸಾಯಿ, ಸದಾನಂದ ಡಂಗನವರ ಮತ್ತಿತರರ ಗಣ್ಯರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಮುಸ್ಲಿಂ ಧರ್ಮಗಳು ಸಾಗುವ ಮೂಲಕ ಸಮಾಜ ಬಾಂಧವರಲ್ಲಿ ಧರ್ಮದ ಕಿಚ್ಚು ಹೆಚ್ಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

