22ರಂದು ಟೈ ಕನೆಕ್ಟ್-2014 ಸಮ್ಮೇಳನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 18
ದೇಶಪಾಂಡೆ ಫೌಂಡೇಶನ್ನ ದಿ ಇಂಡಸ್ ಎಂಟರ್ಪ್ರಿನರ್ಸ್ (ಟೈ) ಹುಬ್ಬಳ್ಳಿ ಶಾಖೆ ವತಿಯಿಂದ ಜ. 22ರಂದು ವಿದ್ಯಾನಗರದ ಬಿವಿಬಿ ಕಾಲೇಜ್ನಲ್ಲಿರುವ ದೇಶಪಾಂಡೆ ಫೌಂಡೇಶನ್ನ ಆಡಿಟೋರಿಯಂನಲ್ಲಿ ಟೈ ಕನೆಕ್ಟ್-2014 ಎಂಬ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಟೈ ಅಧ್ಯಕ್ಷ ವಿವೇಕ ಪವಾರ, ಸಂಯೋಜಕ ವಿವೇಕ ನಾಯಕ ಹಾಗೂ ಡಾ. ಪಿ.ಬಿ. ರೂಡಗಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಂದು ಮಧ್ಯಾಹ್ನ 2 ಗಂಟೆಗೆ ಯಶಸ್ವಿ ಉದ್ಯಮಿ ಮೈಂಡ್ ಟ್ರೀ ಸಂಸ್ಥೆಯ ಚೇರ್ಮನ್ ಸುಬ್ರತೋ ಬಾಗಚಿ ಅವರ ಆಶಯ ಭಾಷಣದೊಂದಿಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಟೈರ್-2 ಶಹರಗಳಲ್ಲಿ ಉದ್ಯಮಶೀಲ ಆಕಾಂಕ್ಷಿಗಳಿಗೆ ಇರುವ ಅವಕಾಶಗಳ ಬಗ್ಗೆ ಬಾಗಚಿ ಮಾತನಾಡಲಿದ್ದಾರೆ ಎಂದರು.
ಈ ಅಧಿವೇಶನಕ್ಕೆ ಎಲಿಫೆಂಟ್ ಕ್ಯಾಚರ್ಸ್ ಎ ಟೈರ್-2 ಸಿಟಿ ಪರಸ್ಪೆಕ್ಟಿವ್ ಎಂದು ಶೀರ್ಷಿಕೆ ನೀಡಲಾಗಿದೆ. ಇದನ್ನು ಸಂತೋಷ ಹುರಳಿಕೊಪ್ಪಿ ನಿರ್ವಹಿಸಲಿದ್ದಾರೆ. ಮಧ್ಯಾಹ್ನ 3.15ರಿಂದ 4.30ರ ವರೆಗೆ ಪ್ಯಾನೆಲ್ ಚರ್ಚೆ ಆಯೋಜಿಸಲಾಗಿದೆ.
ಚರ್ಚೆಯಲ್ಲಿ ಇನ್ವೆಂಟಸ್ ಕ್ಯಾಪಿಟಲ್ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ಕುಮಾರ, ಮೈಂಡ್ ಟ್ರೀ ಸಂಸ್ಥೆ ಹಾಗೂ ಸ್ಪಾರ್ಟ್ ಆಫ್ ವ್ಹಿಲೇಜ್ ಸಂಸ್ಥೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ಪಾರ್ಥಸಾರಥಿ ಎನ್.ಎಸ್., ಪ್ರಣವ್ಕುಮಾರ ಪಾಲ್ಗೊಳ್ಳಲಿದ್ದಾರೆ.
ಸಂಜೆ 5ರಿಂದ 6ರ ವರೆಗೆ ನಡೆಯಲಿರುವ ಅಧಿವೇಶನದಲ್ಲಿ ಸ್ಥಳೀಯ ಉದ್ಯಮಶೀಲ ವ್ಯಕ್ತಿಗಳ ಸಾಹಸಗಾಥೆ ಹಾಗೂ ಉದ್ಯಮದಲ್ಲಿ ಹೊಂದಿದ ಯಶಸ್ಸಿನ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ಮೈಕ್ರೋಫಿನಿಶ್ ವಾಲ್ವಸ್ ಸಂಸ್ಥೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ತಿಲಕ್ ವಿಕಾಂಶಿ, ಧಾರವಾಡ ಮಿಶ್ರಾ ಪೇಢಾ ಸಂಸ್ಥೆ ಮಾಲೀಕ ಸಂಜಯ ಮಿಶ್ರಾ, ಮೈವೆನ್ ಮೇಫ್ರಾನ್ ಸಂಸ್ಥೆ ಮಾಲೀಕ ವಿಕ್ರಮ ಶಿರೂರ ಭಾಗವಹಿಸಲಿದ್ದಾರೆ.
ಸಂಜೆ 6ರಿಂದ 7ರ ವರೆಗೆ ದ್ವಿತೀಯ ಹಾಗೂ ತೃತೀಯ ದರ್ಜೆಯ ಶಹರಗಳನ್ನು ಹೊರತುಪಡಿಸಿ ಇನ್ನಿತರ ಭಾಗದ ಕೆಲ ಉದ್ಯಮಶೀಲ ವ್ಯಕ್ತಿಗಳ ಯಶಸ್ಸು ಮತ್ತು ಗುರಿ ಸಾಧನೆಯ ಅನುಭವಗಳ ಚರ್ಚೆ ನಡೆಯಲಿದ್ದು, ಸಂವಾದದಲ್ಲಿ ವೇಗಾ ಹೆಲ್ಮೆಟ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್ಮನ್ ದಿಲೀಪ್ ಚಂಡಕ್, ರೋಬೋ ಸಾಫ್ಟ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೋಹಿತ್ ಭಟ್, ಕ್ಲಿಯರ್ ಕಾರ್ ರೆಂಟಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕಾಟೆ ಪಾಲ್ಗೊಳ್ಳಲಿದ್ದಾರೆ. ವಿಚಾರ ಸಮ್ಮೇಳನದ ಸಮಾರೋಪವು ಗುರುರಾಜ ದೇಶಪಾಂಡೆ ಅವರ ಆಶಯ ನುಡಿಗಳೊಂದಿಗೆ ಮುಕ್ತಾಯಗೊಳ್ಳಲಿದೆ. ದೇಶಪಾಂಡೆಯವರು, ಉದ್ಯಮಶೀಲತೆಯ ತಮ್ಮ ಅನುಭವಗಳ ಕುರಿತು ಮತ್ತು ಉದ್ಯಮಶೀಲ ವ್ಯಕ್ತಿಗಳ ಭಾಗವಹಿಸುವಿಕೆ ಹಾಗೂ ಯಶಸ್ವಿ ಉದ್ಯಮಶೀಲ ವ್ಯಕ್ತಿಗಳನ್ನು ರೂಪಿಸುವಲ್ಲಿ ಟೈ-ಹುಬ್ಬಳ್ಳಿ ಶಾಖೆಯು ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.
ನೋಂದಣಿ ಹಾಗೂ ಇನ್ನಿತರ ಮಾಹಿತಿಗೆ ಆಸಕ್ತರು ಸಂಪರ್ಕಾಧಿಕಾರಿಗಳಾದ ಮಹೇಶ ವಿ.ಕೆ., ಮೊ. 9448154063 ಅಥವಾ ಶಿವಕುಮಾರ ಬಿರಾದಾರ ಮೊ. 9964205408ಗೆ ಸಂಪರ್ಕಿಸಬಹುದೆಂದೂ ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

