ಬ್ಲಾಕ್ಮೇಲ್ ಅಪಹರಣಕಾರರ ಸೆರೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 31
ಭೂಗತ ಪಾತಕಿ ರವಿ ಪೂಜಾರಿ ಹೆಸರು ಹೇಳಿಕೊಂಡು ನಗರದ ಪ್ರತಿಷ್ಠಿತ ವ್ಯಾಪಾರಿಗಳ ಮಕ್ಕಳನ್ನು ಅಪಹರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ತಂಡದ ಇಬ್ಬರು ದುಷ್ಕರ್ಮಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಮೂಲದ ವಿಕ್ಕಿ ಪೂಜಾರಿ ಹಾಗೂ ಸಂಜಯ ಬಂಧಿತ ಆರೋಪಿಗಳು. ಬಂಧಿತರಿಂದ ಅಪಹರಣಕ್ಕೆ ಉಪಯೋಗಿಸಿದ ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ತಲೆ ಮರೆಸಿಕೊಂಡಿರುವ ವಿಕ್ಕಿ ಪೂಜಾರಿ ವಾಹನ ಚಾಲಕ ಬ್ಯಾಹಟ್ಟಿ ಗ್ರಾಮದ ಜಗದೀಶ, ಈ ಹಿಂದೆ ಪ್ರತಿಷ್ಠಿತ ನಾನ್ವೆಜ್ ಹೊಟೇಲ್ನಲ್ಲಿ ಅಡಿಗೆಯವನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದ್ದು, ಜಗದೀಶನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮೂವರು ದುಷ್ಕರ್ಮಿಗಳು ಕೂಡಿಕೊಂಡು ಜ. 25ರಂದು ಮಧ್ಯಾಹ್ನ 12ಕ್ಕೆ ಕೇಶ್ವಾಪುರದ ಗೋಲ್ಡ್ ಜಿಮ್ ಬಳಿ ನಗರದ ಪಾಯಲ್ ಜ್ಯುವೆಲರ್ಸ್ ಮಾಲೀಕ ರೈಸಾಬ ವಿನೋದ ತೆಲಿಸ್ರಾ ಪುತ್ರ ರೀಶಬ್ ಹಾಗೂ ಪೇಪರ್ ವ್ಯಾಪಾರಿ ರಮೇಶ ಲಾಲ್ವಾನಿ ಪುತ್ರ ನವರತ್ನ ಅವರನ್ನು ಅಪಹರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ನಂತರ ಯುವಕರಿಬ್ಬರನ್ನು ಹಾವೇರಿ ನಗರದ ಹೊರವಲಯಕ್ಕೆ ಕರೆದೊಯ್ದು ಅವರುಗಳ ಬಳಿಯಿದ್ದ ಮೊಬೈಲ್ ಫೋನ್ ಕಸಿದುಕೊಂಡು ಥಳಿಸಿದ್ದಾರಲ್ಲದೆ, ರು. 15 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಈ ಘಟನೆ ಪೂರ್ವದಲ್ಲಿ ದುಷ್ಕರ್ಮಿಗಳು ತಮ್ಮಿಂದ ಎರಡು ಬಂಗಾರದ ಬಿಸ್ಕಿಟ್ಗಳನ್ನು ಪಡೆದುಕೊಂಡಿದ್ದಾರೆ ರೈಸಾಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಯುವಕರಿಂದ ರು. 4 ಲಕ್ಷ ಆಮಿಷ: ಅಪಹರಣಕ್ಕೊಳಗಾದ ಇಬ್ಬರೂ ಯುವಕರು, ರು. 4 ಲಕ್ಷ ಕೊಡುವುದಾಗಿ ದುಷ್ಕರ್ಮಿಗಳ ಮನವೊಲಿಸಿ ಗುರುವಾರ ಬೆಳಗ್ಗೆ ಆರೋಪಿಗಳೊಂದಿಗೆ ನಗರಕ್ಕೆ ವಾಪಸ್ಸಾಗಿದ್ದರು. ನಂತರ, ತಮಗೆ ಅಪಹರಿಸಿರುವ ಸುದ್ದಿ ಕೇಶ್ವಾಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ದುಷ್ಕರ್ಮಿಗಳ ಬಂಧಿಸಲು ಪೊಲೀಸರು ಸಂಚು ರೂಪಿಸಿ ಖಾಲಿ ಬ್ಯಾಗ್ಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳನ್ನು ನಿಲ್ಲಿಸಿದ್ದರಾದರೂ ದುಷ್ಕರ್ಮಿಗಳು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು.
ಸಿಕ್ಕಿದ್ದು ಹೇಗೆ..?: ದೇವಾಂಗಪೇಟ ಗೋಲ್ಡ್ ನೆಕ್ಟ್ಸ್ ಅಪಾರ್ಟ್ಮೆಂಟ್ನಲ್ಲಿ ವಿಕ್ಕಿ ಹಾಗೂ ಆತನ ಸಹಚರರು ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಕಲೆ ಹಾಕಿದ ಕೇಶ್ವಾಪುರ ಠಾಣೆಯ ಪಿಎಸ್ಐ ಬಿ.ಕೆ. ಪಾಟೀಲ, ಅತ್ಯಂತ ಜಾಣ್ಮೆ ಪ್ರದರ್ಶಿಸಿದ ಪರಿಣಾಮ ಆರೋಪಿಗಳಿಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

